ಹಿಂದಿರುಗಿ ಬಾ ಎಂದ ಪತಿಗೆ ಪಾಕ್ ಮಹಿಳೆ ಸೀಮಾ ಹೈದರ್ ಕೊಟ್ಟ ಉತ್ತರ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಬ್​​ಜಿ ಮೂಲಕ ಪ್ರೀತಿಸಿದಾತನಿಗಾಗಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಸದ್ಯ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ.

ಈ ನಡುವೆ ಆಕೆಯ ಪತಿ ಗುಲಾಮ್ ಪಾಕಿಸ್ತಾನಕ್ಕೆ ಮಕ್ಕಳ ಜತೆ ನೀನು ಹಿಂದಿರುಗಿ ಬಾ ಎಂದು ಮನವಿ ಮಾಡಿದ್ದಾರೆ. ಪತಿಯ ಮನವಿಗೆ ಸ್ಪಂದಿಸಿರುವ ಸೀಮಾ, ‘ಗುಲಾಂ ನಮಗೆ ತೊಂದರೆ ಕೊಡಬೇಡಿ, ಬದುಕಲು ಬಿಡಿ. ನೀವು ಎಲ್ಲಿದ್ದಿರೋ ಅಲ್ಲಿಯೇ ಇರುವುದು ಒಳಿತು. ನಾವು ಇರುವಲ್ಲಿಯೇ ಇರಲು ಬಿಡಿ, ನಿಮ್ಮ ಮೊದಲ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದು ಪ್ರೀತಿಸಿದ ವ್ಯಕ್ತಿಯೊಂದಿಗೆ ವಾಸವಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!