ಅಜ್ಮೀರ್‌ ದರ್ಗಾಕ್ಕೆ ಚಾದರ್‌ ಅರ್ಪಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದ ಅಜ್ಮೀರ್‌ನಲ್ಲಿರುವ ದರ್ಗಾಕ್ಕೆ ಪ್ರಧಾನಿ ಮೋದಿ ಅವರು ಚಾದರವನ್ನು ಕಳುಹಿಸಿ ಕೊಟ್ಟಿದ್ದಾರೆ.

ಪ್ರಖ್ಯಾತ ಸೂಫೀ ಸಂತ ಖ್ವಾಜ ಮಈನುದ್ದೀನ್‌ ಚಿಶ್ತಿ ಅವರ 811ನೇ ಉರೂಸ್‌ ಗುರುವಾರ ನಡೆಯಿತು. ಈ ವಿಶೇಷ ದಿನದ ಅಂಗವಾಗಿ ಚಾದರದೊಂದಿಗೆ ಪತ್ರವೊಂದನ್ನೂ ಕಳುಹಿಸಿಕೊಟ್ಟಿರುವ ಪ್ರಧಾನಿ ದೇಶದಲ್ಲಿನ ಚಿಶ್ತಿ ಅನುಯಾಯಿಗಳಿಗೆ ಉರೂಸ್‌ನ ಶುಭ ಹಾರೈಸಿದ್ದಾರೆ.

ಚಿಶ್ತಿ ಸಾಹೇಬ್‌ ಭಾರತದ ಶ್ರೇಷ್ಠ ಆಧ್ಯಾತ್ಮಿಕ ಸಂಪ್ರದಾಯಗಳ ಸಾಕಾರವಾಗಿದ್ದರು. ಗರೀಬ್ ನವಾಜ್ ಅವರು ಮನುಕುಲಕ್ಕೆ ಮಾಡಿದ ಸೇವೆಯು ಮುಂಬರುವ ಪೀಳಿಗೆಗೆ ಸ್ಫೂರ್ತಿಯಾಗಿರುತ್ತದೆ. ದರ್ಶಿಗಳು, ಪೀರ್‌ಗಳು ಮತ್ತು ಫಕೀರರು ತಮ್ಮ ಶಾಂತಿ, ಸಹಬಾಳ್ವೆ, ಏಕತೆಯ ಸಂದೇಶದ ಮೂಲಕ ದೇಶದ ಸಾಂಸ್ಕೃತಿಕ ಬಂಧವನ್ನು ಗಟ್ಟಿಗೊಳಿಸಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಅವರು ಚಾದರ್‌ ಅನ್ನು ಅಲ್ಪಸಂಖ್ಯಾತ ಸೆಲ್‌ ಅಧ್ಯಕ್ಷ ಜಮಾಲ್‌ ಸಿದ್ದಿಕಿ ಅವರಿಗೆ ಮಂಗಳವಾರ ಹಸ್ತಾಂತರಿಸಿದ್ದರು. ಆ ವೇಳೆ ಅಲ್ಪಸಂಖ್ಯಾತ ಸಚಿವೆ ಸ್ಮೃತಿ ಇರಾನಿ ಅವರೂ ಅವರೊಂದಿಗಿದ್ದರು. ಜಮಾಲ್‌ ಸಿದ್ದಿಕಿ ಅವರು ಚಾದರ್‌ ಅನ್ನು ಅಜ್ಮೀರ್‌ನ ದರ್ಗಾಕ್ಕೆ ಅರ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!