ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ ದೊರಕಿದೆ. ಜಾಗತಿಕ ನಾಯಕರಿಗೆ ಸಂಬಂಧಿಸಿದ ‘ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್’ ಬಿಡುಗಡೆ ಮಾಡಿರುವ ರೇಟಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೆನಡಾದ ಕೌಂಟರ್‌ಪಾರ್ಟ್ ಜಸ್ಟಿನ್ ಟ್ರೂಡೋ ಅವರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಶೇ.71ರಷ್ಟು ಅನುಮೋದಿತ ಅಂಕಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶೇ.66 ರಷ್ಟು ಅಂಕ ಗಳಿಸಿದ ಮೆಕ್ಸಿಕೋದ ಆಂಟ್ರೆಸ್ ಮ್ಯಾನುಯೆಲ್ ಲೊಪೆಜ್ ಒಬ್ರಡಾರ್ ಇದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ಪ್ರತಿ ನಾಯಕನನ್ನು ಟ್ರ್ಯಾಕ್ ಮಾಡಲು ಆರಂಭಿಸಿದ ಸಮಯದಿಂದ, 2020ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅನುಮೋದನೆ ರೇಟಿಂಗ್ ಗರಿಷ್ಠ ಮಟ್ಟದಲ್ಲಿತ್ತು. ಕಳೆದ ವರ್ಷ ಕೋವಿಡ್ ಎರಡನೇ ಅಲೆ ವೇಳೆ ರೇಟಿಂಗ್ ಕಡಿಮೆಯಾಗಿತ್ತು.

ಕಂಪನಿ ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್,ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಮತ್ತು ಯುಎಸ್‌ನ ಸರ್ಕಾರಿ ನಾಯಕರ ಅನುಮೋದನೆ ರೇಟಿಂಗ್ ಟ್ರ್ಯಾಕ್ ಮಾಡುತ್ತಿದೆ.

ಜಗತ್ತಿನ ಜನಪ್ರಿಯ ನಾಯಕರ ಪಟ್ಟಿ ಹೀಗಿದೆ..

ನರೇಂದ್ರ ಮೋದಿ: 71%

ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್: 66%

ಮಾರಿಯೋ ಡ್ರಾಘಿ: 60%

ಫ್ಯೂಮಿಯೊ ಕಿಶಿಡಾ: 48%

ಓಲಾಫ್ ಸ್ಕೋಲ್ಜ್: 44%

ಜೋ ಬಿಡೆನ್: 43%

ಜಸ್ಟಿನ್ ಟ್ರುಡೊ: 43%

ಸ್ಕಾಟ್ ಮಾರಿಸನ್: 41%

ಪೆಡ್ರೊ ಸ್ಯಾಂಚೆಜ್: 40%

ಮೂನ್ ಜೇ-ಇನ್: 38%

ಜೈರ್ ಬೋಲ್ಸನಾರೊ: 37%

ಎಮ್ಯಾನುಯೆಲ್ ಮ್ಯಾಕ್ರನ್: 34%

ಬೋರಿಸ್ ಜಾನ್ಸನ್: 26%

 

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!