ಲೈಬೀರಿಯಾದ ಧಾರ್ಮಿಕ ಸಮಾರಂಭದಲ್ಲಿ ಕಾಲ್ತುಳಿತ: ಗರ್ಭಿಣಿ, 11 ಮಕ್ಕಳು ಸೇರಿ 29 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೈಬೀರಿಯಾದ ರಾಜಧಾನಿ ಮೊನ್ವೋರಿಯಾದ ಕ್ರೈಸ್ತ ಧಾರ್ಮಿಕ ಸಮಾರಂಭವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಮಕ್ಕಳು, ಗರ್ಭಿಣಿ ಸಹಿತ 29 ಮಂದಿ ಮೃತಪಟ್ಟಿದ್ದಾರೆ.

ಚಾಕು ಚೂರಿ ಹಿಡಿದಿದ್ದ ಕೊಲೆಗಡುಕರ ಗುಂಪೊಂದು ಏಕಾಏಕಿ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಇದರಿಂದಾಗಿ ಗಾಬರಿಯಾದ ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಈ ವೇಳೆ ಕಾಳ್ತುಳಿತ ಸಂಭವಿಸಿದ್ದು, 29 ಮಂದಿ ಮೃತಪಟ್ಟಿದ್ದಾರೆ.

ಮೊನ್ವೋರಿಯಾ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಬೀದಿ ಕಾಳಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ಭಾಗವಾಗಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!