ಅಮೆರಿಕ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ವರ್ಚುವಲ್​ ಸಂವಾದ: ಉಕ್ರೇನ್ ಬಿಕ್ಕಟ್ಟು ಶೀಘ್ರವೇ ಅಂತ್ಯಕ್ಕೆ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನಡುವಿನ ವರ್ಚುವಲ್ ಸಂವಾದವು ಪ್ರಾರಂಭವಾಗಿದ್ದು,ಇಬ್ಬರೂ ನಾಯಕರು ಯುಎಸ್-ಭಾರತ ದ್ವಿಪಕ್ಷೀಯ ಬಾಂಧವ್ಯವನ್ನ ಶ್ಲಾಘಿಸಿದರು.

ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ಉಕ್ರೇನ್​​ನಲ್ಲಿನ ಪರಿಸ್ಥಿತಿ ಕುರಿತು ರಷ್ಯಾ-ಉಕ್ರೇನ್​ ಅಧ್ಯಕ್ಷರೊಂದಿಗೆ ನಾವು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಮಾತುಕತೆ ಮೂಲಕ ಉಭಯ ದೇಶಗಳ ನಡುವೆ ಉಂಟಾಗಿರುವ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ನಾವು ಮನವಿ ಮಾಡಿದ್ದು, ಉಕ್ರೇನ್​ ಅಧ್ಯಕ್ಷರೊಂದಿಗೆ ನೇರವಾಗಿ ಮಾತುಕತೆ ನಡೆಸುವಂತೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ಗೆ ತಿಳಿಸಿದ್ದೇವೆ.ಬುಚಾದಲ್ಲಿನ ನಾಗರಿಕರ ಹತ್ಯೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದೇನೆ ಎಂದರು.

ಯುದ್ಧ ಪೀಡಿತ ಉಕ್ರೇನ್‌ನಲ್ಲಿನ ನಾಗರಿಕರ ಸುರಕ್ಷತೆ ಮತ್ತು ಅವರಿಗೆ ಮಾನವೀಯ ನೆರವು ನಿರಂತರ ನೀಡುವುದಕ್ಕೆ ನಾವು ಆದ್ಯತೆ ನೀಡಿದ್ದೇವೆ ಎಂದರು.

ಈ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್​, ರಷ್ಯಾ ಯುದ್ಧದ ಪರಿಣಾಮ, ಪರಿಸ್ಥಿತಿ ಸ್ಥಿರಗೊಳಿಸುವ ಕುರಿತು ಅಮೆರಿಕ ಮತ್ತು ಭಾರತ ತಮ್ಮ ಸಮಾಲೋಚನೆಯನ್ನು ಮುಂದುವರೆಸಲಿವೆ. ನಮ್ಮ ಮಾತುಕತೆಯಿಂದ ಉಭಯ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ ಎಂದರು.

ಭಾರತ ಮತ್ತು ನಮ್ಮ ನಡುವಿನ ನಿಕಟ ಸಮಾಲೋಚನೆ ಮುಂದುವರೆಯಲಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವಾಗಿ ಬೆಳೆಯಲಿದೆ. ರಕ್ಷಣಾ ವಲಯದಲ್ಲಿ ನಮ್ಮ ಪಾಲುದಾರಿಗೆ ಮತ್ತಷ್ಟು ಗಟ್ಟಿಯಾಗಲಿದ್ದು, ನಮ್ಮ ಸ್ನೇಹ ಮತ್ತು ಮಾನವೀಯ ಮೌಲ್ಯ ಆಳವಾಗಿ ಬೇರು ಉರಲಿವೆ. ಉಕ್ರೇನ್​ ಜನರಿಗೆ ಮಾನವೀಯ ರೀತಿಯಲ್ಲಿ ಸಹಾಯ ಮಾಡಿರುವ ಭಾರತದ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಬಳಿಕ ಉಭಯ ನಾಯಕರ ಮಧ್ಯೆ ದ್ವಿಪಕ್ಷೀಯ ಸಹಕಾರ, ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್ ಬೆಳವಣಿಗೆ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!