ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಶೃಂಗಸಭೆ ಮುಗಿಸಿ ಪ್ರಧಾನಿ ಮೋದಿ ಸೀದ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ.
ಯಾಕೆ ಗೊತ್ತಾ? ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು!
ಹೌದು, ಪ್ರಧಾನಿ ಮೋದಿ ಶನಿವಾರ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಅವರ ಜತೆ ಸಭೆ ನಡೆಸಿ ನಂತರ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿಯನ್ನು ಬರಮಾಡಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಏರ್ಪೋರ್ಟ್ನಲ್ಲಿ ಸಾಕಷ್ಟು ಜನ ಸೇರುವೆ ನಿರೀಕ್ಷೆ ಇದೆ. ತದನಂತರ ಪೀಣ್ಯದಲ್ಲಿ ರೋಡ್ಶೋ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ.