Tuesday, October 3, 2023

Latest Posts

ಹಿಂದಿ-ಮರಾಠಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ನಟಿಸಿ ಹೆಸರಾಗಿದ್ದ ಹಿರಿಯ ನಟಿ ಸೀಮಾ ಡಿಯೋ (81) ಇಂದು ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅಭಿನಯ್ ಡಿಯೋ ‌ಮಾಹಿತಿ ನೀಡಿದ್ದಾರೆ.

ಸೀಮಾ ಡಿಯೋ ಅವರು ದಿವಂಗತ ನಟ ರಮೇಶ್​ ಡಿಯೋ ಅವರ ಪತ್ನಿ. ಅವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನಟಿ ಸೀಮಾ ಅವರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಸರಸ್ವತಿಚಂದ್ರ, ಸಂಸಾರ್​, ಕೋಶಿಶ್​, ಆನಂದ್​, ಮರ್ದ್​ ಮತ್ತು ಇತರ ಚಿತ್ರಗಳ ಮೂಲಕ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!