Wednesday, June 7, 2023

Latest Posts

ಸಿಲಿಕಾನ್ ಸಿಟಿಗೆ ಪ್ರಧಾನಿ ಮೋದಿ ಆಗಮನ: ಕೆಲವೇ ಕ್ಷಣದಲ್ಲಿ ರೋಡ್ ಶೋ ಶುರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಹೆಚ್ ಎ ಎಲ್ (HAL) ಏರ್ ಪೋರ್ಟ್ ಗೆ ಪ್ರಧಾನಿ ಮೋದಿ ಆಗಮಿಸಿದ್ದು, ಅಲ್ಲಿಂದ ಬಿಐಇಸಿ ಹೆಲಿಪ್ಯಾಡ್ ಗೆ ಪ್ರಧಾನಿ ಮೋದಿ ತೆರಳಿ ಬಳಿಕ ಕಾರಿನ ಮೂಲಕ ರೋಡ್ ಶೋ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಕೆಲವೇ ಕ್ಷಣಗಳಲ್ಲಿ ರೋಡ್ ಶೋ ಆರಂಭವಾಗಲಿದೆ. ನೈಸ್ ರೋಡ್ ಜಂಕ್ಷನ್ ನಿಂದ ಸುಮನಹಳ್ಳಿವರೆಗೆ 5.3 ಕಿಮೀ ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಸಾಂಸ್ಕೃತಿಕ ಕಲಾತಂಡಗಳ ಆಯೋಜನೆ ಮಾಡಲಾಗಿದೆ. ನೈಸ್ ರಸ್ತೆ ಜಂಕ್ಷನ್ ಬಳಿ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!