ಪ್ರಧಾನಿ ಮೋದಿಯವರ ನಾಯಕತ್ವದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಚ್ಚಿನ ಮನ್ನಣೆ: ತೇಜಸ್ವಿನಿ ಗೌಡ

ಹೊಸದಿಗಂತ ವರದಿ,ಹುಬ್ಬಳ್ಳಿ:

ಪ್ರಧಾನಿ ಮೋದಿಯವರ ನಾಯಕತ್ವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಅದಕ್ಕೆ ಇತ್ತೀಚೆಗೆ ನಡೆದ ಜಿ. ೭ ಶೃಂಗಸಭೆಯಲ್ಲಿ ದೇಶಕ್ಕೆ ಸಿಕ್ಕ ಪ್ರತಿಕ್ರಿಯೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.

ಆದರೆ ಯಾವುದೋ ವಿಚಾರಧಾರೆಗೆ ವ್ಯಕ್ತಿ ಓರ್ವನ ಕತ್ತು ಕೊಯ್ಯುವ ಹಾಗೂ ದೇಶದ ಪ್ರಧಾನಿಗೆ ಬೆದರಿಕೆ ಹಾಕಿರುವುದು ಖಂಡನೀಯ. ಈ ಕೃತ್ಯ ವೆಸಗಿದವರನ್ನು ಈಗಾಗಲೇ ಬಂಸಲಾಗಿದ್ದು, ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಳೆ ಹುಬ್ಬಳ್ಳಿ ಗಲಭೆಯಲ್ಲಿ ಹಲವರು ಕೈವಾಡವಿತ್ತು. ಪೊಲೀಸರು ಅವರನ್ನು ಬಂಸಿ ಶಿಕ್ಷೆಗೆ ಒಳಪಡಿಸಿದ್ದಾರೆ. ಅಂತಹ ಶಕ್ತಿಗಳನ್ನು ಮೆಟ್ಟಿನಿಲ್ಲುವ ಶಕ್ತಿ ಭಾರತಕ್ಕಿದೆ. ಸಮಾಜದಲ್ಲಿ ಈ ರೀತಿ ಕಾನೂನು ಕೈಗೆತ್ತಿಕೊಳ್ಳುವರಿಗೆ ಕ್ಷಮೆ ಇಲ್ಲ. ಬಿಜೆಪಿ ಇಂತವರನ್ನು ವಿರೋಸುತ್ತದೆ ಎಂದರು.

ಅಗ್ನಿಪಥ ಕ್ರಾಂತಿಕಾರಿ ಬದಲಾವಣೆ: ಅಗ್ನಿಪಥದ ಮೂಲಕ ಸೇನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಸೇನೆಯು ಯುವ ಶಕ್ತಿ ನೀಡುವ ಈ ಯೋಜನೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಆದರೆ, ಅಪಪ್ರಚಾರ ಮೀರಿಸುವಂತೆ ಯುವಜನರು ನೇಮಕಾತಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಬೇಜವಾಬ್ದಾರಿ ನಡವಳಿಕೆ ಬಿಟ್ಟು, ತಮ್ಮ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿಕೊಳ್ಳಲಿ. ಇಲ್ಲದಿದ್ದರೆ, ಆ ಪಕ್ಷ ಅದೃಶ್ಯವಾಗಲಿದೆ ಎಂದು ತಿಳಿಸಿದರು.

ದೇಶದ ಸೇನೆ ಸುಸಂಸ್ಕೃತವಾಗಿದೆ. ಇಂತಹ ಸೇನೆಗೆ ಯುವಜನರ ಅವಶ್ಯಕತೆಯಿದ್ದು, ವಿರೋಧ ಪಕ್ಷಗಳು ರಾಜಕೀಯ ಹಸ್ತಕ್ಷೇಪ ಮಾಡುವ ಮೂಲಕ ಜನಸಾಮಾನ್ಯರ ದಾರಿ ತಪ್ಪಿಸುತ್ತಿದ್ದಾರೆ. ದೇಶದ ರಕ್ಷಣೆ ಮಹತ್ತರ ಕೆಲಸ ಸೇನೆ ಮಾಡುತ್ತಿದೆ. ಇಂತಹ ಸೇನೆಯಲ್ಲಿ ಯುವಕರು ಬೇಕೋ ಬೇಡವೋ ಹೇಳಿ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಯವರ ಮೇಲೆ ಸುಳ್ಳು ಆರೋಪ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಕ್ಲಿನ್‌ಚಿಟ್ ನೀಡಿದೆ. ದೇಶದ ಗಣತೆ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ದುಷ್ಟರು ಮಾಡಿದ್ದರು. ಈಗ ಅವರು ಕಂಬಿ ಹಿಂದೆ ಹೋಗುವಂತಾಗಿದೆ. ಬಿಜೆಪಿ ದೇಶದಲ್ಲಿ ಅಭಿವೃದ್ಧಿ ಪರವಾದ ಕೆಲಸ ಮಾಡುತ್ತಿದೆ. ಅಕಾರ ವಿದ್ದರು ಇಲ್ಲದಿದ್ದರು ಸಹ ಜನಸಾಮಾನ್ಯರ ಪರವಾಗಿ ನಮ್ಮ ನಿಲುವು ಇರುತ್ತದೆ. ಉತ್ತರ ಕರ್ನಾಟಕ ಪ್ರತ್ಯೇಕವಾಗುವುದಕ್ಕೆ ನಮ್ಮ ಬೆಂಬಲವಿಲ್ಲ. ಬಿಜೆಪಿ ರಾಜ್ಯವನ್ನು ಒಡೆಯುವುದಲ್ಲ. ಒಂದು ಮಾಡುವುದಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!