ಕೋವಿಡ್ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಫೋಟೋ ತೆರವು: ಕಾರಣ ತಿಳಿಸಿದ ಇಲಾಖೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೋವಿಡ್ ಲಸಿಕೆ ಪಡೆದ ಬಳಿಕ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಲಾಗಿತ್ತು. ಆದರೆ ಈಗ ಡೌನ್ಲೋಡ್ ಮಾಡುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋಗೆ ಇಲ್ಲವಾಗಿದೆ.

ಇದು ಕೋವೀಶೀಲ್ಡ್ ಅಡ್ಡಪರಿಣಾಮದ ಬಳಿಕ ಕೇಂದ್ರ ಬಿಜೆಪಿ ಸರ್ಕಾರ ತೆಗೆದಿದೆ ಎಂದು ಆರೋಪ ಕೇಳಿಬಂಡಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾರಣ ಪ್ರಮಾಣಪತ್ರ, ವೆಬ್‌ಸೈಟ್ ಸೇರಿದಂತೆ ಅಲ್ಲೆಡೆಯಿಂದ ಫೋಟೋಗಳನ್ನು ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಕೋವಿನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಸದ್ಯ ಪ್ರಧಾನಿ ಮೋದಿ ಫೋಟೋ ಇರುವುದಿಲ್ಲ. ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಪ್ರಕಾರ ಸರ್ಕಾರದ ಎಲ್ಲಾ ವೆಬ್‌ಸೈಟ್, ಆ್ಯಪ್‌ಗಳಿಂದ ಪ್ರಧಾನಿ ಮೋದಿ, ಆಯಾ ಸಚಿವಾಲಯದ ಸಚಿವರ ಫೋಟೋಗಳನ್ನು ತೆಗೆದು ಹಾಕಲಾಗಿದೆ. ಫೋಟೋ ತೆಗೆದು ಹಾಕಿದ್ದ ಹಿಂದೆ ಬೇರೆ ಯಾವುದೇ ಉದ್ದೇಶವಾಗಲಿ,ವಿವಾದವಾಗಲಿ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ವಿಧಾನಸಭಾ ಚುನಾವಣೆ ವೇಳೆ ಆಯಾ ರಾಜ್ಯಗಳಲ್ಲೂ ಪ್ರಧಾನಿ ಮೋದಿ ಫೋಟೋವನ್ನು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ತೆಗೆದು ಹಾಕಲಾಗಿತ್ತು. ನೀತಿ ಸಂಹಿತೆ ಗೆ ಧಕ್ಕೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಲು ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ಕೋವೀಶೀಲ್ಡ್ ಲಸಿಕೆ ಅಡ್ಡಪರಿಣಾಮ ಬಳಿಕ ಫೋಟೋ ತೆಗೆದು ಹಾಕಲಾಗಿದೆ ಅನ್ನೋ ಮಾಹಿತಿ ಹರಿದಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!