ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಆಘಾತ ಎದುರಾಗಿದೆ. ರೈನಾ ಸೋದರ ಮಾವನ ಪುತ್ರ ಟ್ಯಾಕ್ಸಿ ಡಿಕ್ಕಿಯಾಗಿ ಮೃತಪಪಟ್ಟ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ.
ಸ್ಕೂಟರ್ ಮೂಲಕ ತೆರಳುತ್ತಿದ್ದ ಸುರೇಶ್ ರೈನಾ ಸೋದರ ಮಾವನ ಪುತ್ರ ಸೌರಬ್ ಕುಮಾರ್ ಹಾಗೂ ಆಪ್ತ ಸಂಬಂಧಿ ಶುಭಮ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸ್ಕೂಟರ್ ಮೂಲಕ ಸೌರಬ್ ಹಾಗೂ ಶುಭಮ್ ಇಬ್ಬರು ತೆರಳುತ್ತಿದ್ದ ವೇಳೆ ಅತೀ ವೇಗವಾಗಿ ಬಂದ ಟ್ಯಾಕ್ಸಿ ಡಿಕ್ಕಿ ಹೊಡೆದಿದೆ. ಸ್ಕೂಟರ್ ಡಿಕ್ಕಿ ಹೊಡೆದ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಸೌರಬ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೋರ್ವ ಸಂಬಂಧಿ ಶುಭಮ್ ಆಸ್ಪತ್ರೆ ಸಾಗಿಸುವ ಮಧ್ಯ ಮೃತಪಟ್ಟಿದ್ದಾರೆ.
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಕುರಿತು ಇತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಮೂಲಕ ಗಗ್ಗಲ್ ನಿವಾಸಿಯಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಾದಿಂದ ಮಂಡಿಗೆ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ.
ಕಳೆದ ವರ್ಷ ಸುರೇಶ್ ರೈನಾ ಮಾವ ಅಶೋಕ್ ಕುಮಾರ್ ಮೇಲೆ ರೌಡಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.