ಮೋದಿಯನ್ನು ಕಂಡೊಡನೆ ಬಳಿ ಬಂದು ಪ್ರೀತಿಯ ಅಪ್ಪುಗೆ ನೀಡಿದ ಅಮೆರಿಕ ಅಧ್ಯಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಜಪಾನ್‌ನಲ್ಲಿ ನಡೆಯುತ್ತಿರುವ ಜಿ7 ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅತಿಥಿ ರಾಷ್ಟ್ರವಾಗಿ ಭಾರತದ ಪರ ಭಾಗವಹಿಸುವಂತೆ ಮೋದಿಗೆ ಆಹ್ವಾನ ನೀಡಿದ್ದರಿಂದ ಹಿರೋಷಿಮಾಗೆ ತೆರಳಿದ್ದಾರೆ. ಹಿರೋಷಿಮಾದಲ್ಲಿ ನಡೆದ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮೋದಿ ಅವರನ್ನು ನೋಡಲು ಅಮೆರಿಕ ಅಧ್ಯಕ್ಷ ಜೋ ಬಿಡನ್ ಬಂದಿದ್ದರು. ಮೋದಿ-ಬಿಡನ್ ಆಲಿಂಗನ ಕೆಲವು ಕ್ಷಣಗಳು ಇದೀಗ ವೈರಲ್‌ ಆಗುತ್ತಿವೆ.

ಮೋದಿಯವರನ್ನು ನೋಡಿದ ಕೂಡಲೇ ಜೋ ಬಿಡೆನ್‌ ಬಳಿ ಬಂದು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಮೋದಿ ಕಂಡರೆ ಬಿಡೆನ್‌ಗೆ ಅದೆಷ್ಟು ಪ್ರೀತಿ ಎಂಬುದು ಹಿಂದೆ ನಡೆದ ಕೆಲವೂ ಘಟನೆಗಳೂ ಸಾಕ್ಷಿಯಾಗಿವೆ.

ಜಪಾನ್ ಪ್ರವಾಸದ ವೇಳೆ ಮೋದಿ ಹಲವು ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದರು. ದ್ವಿಪಕ್ಷೀಯ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು. ನಿನ್ನೆ ಕೂಡ ಮೋದಿ ಅವರು ಜಪಾನ್‌ನಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಕೆಲಕಾಲ ಮಾತನಾಡಿದ್ದರು. ಭಾರತವು ಜಿ20 ಅಧ್ಯಕ್ಷತೆ ವೇಳೆ ಮೋದಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ಗಮನಾರ್ಹ. ಹಿರೋಷಿಮಾದಲ್ಲಿ ಶಾಂತಿ ಸಂದೇಶವಾಗಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದಾರೆ.

ಜಿ7 ಶೃಂಗಸಭೆಯ ಭಾಗವಾಗಿ ಚೀನಾದ ನಿಲುವಿನ ಕುರಿತು ಮೋದಿ ಹಲವು ದೇಶಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.  ಈ ಸಮಾವೇಶದಲ್ಲಿ ತಮ್ಮ ವಿರುದ್ಧ ನಿರ್ಧಾರಗಳನ್ನು ಕೈಗೊಳ್ಳುವ ಆತಂಕವೂ ಚೀನಾಕ್ಕಿದೆ. ಪ್ರಸ್ತುತ, ಅನೇಕ ದೇಶಗಳ ಮುಖ್ಯಸ್ಥರು ಜಪಾನ್‌ನಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!