Friday, March 24, 2023

Latest Posts

ನನಸಾಯ್ತು ಮಲೆನಾಡಿಗರ ಕನಸು: ಪ್ರಧಾನಿ ಹಸ್ತದಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂತೂ ಮಲೆನಾಡ ಜನತೆಯ ಕನಸು ನನಸಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಸ್ತದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಇಂದು ಲೋಕಾರ್ಪಣೆಗೊಂಡಿದೆ. ಮೊಟ್ಟ ಮೊದಲ ಬಾರಿಗೆ ಇದೇ ವಿಮಾನ ನಿಲ್ದಾಣಕ್ಕೆ ಬಂದಿಳಿದು ಉದ್ಘಾಟನೆ ಮಾಡಿರುವುದು ಬಹಳ ವಿಶೇಷ. ರಾಜ್ಯ ಅಗ್ರಗಣ್ಯ ನಾಯಕ ಬಿ.ಎಸ್‌.ಯಡಿಯೂರಪ್ಪನವರ ಜನ್ಮದಿನದಂದು ವಿಮಾನ ನಿಲ್ದಾಣ ಉದ್ಘಾಟನೆಯಾಗಿರುವುದು ಬಹಳ ಸಂತಸದ ಸಂಗತಿ.

ಉದ್ಘಾಟನೆ ಬಳಿ ಸಮಾರಂಭದ ವೇದಿಕೆಯಲ್ಲಿ ವಿಮಾನ ನಿಲ್ದಾಣದ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ವಿಮಾನ ನಿಲ್ದಾಣ ಉದ್ಘಾಟನೆ ಬಳಿಕ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.

ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗಳಿಗೆ ಮೋದಿ ಶಂಕುಸ್ಥಾಪನೆ, ಶಿವಮೊಗ್ಗ ಸ್ಮಾರ್ಟ್‌ ಸಿಟಿ ಕಾಮಗಾರಿಗೆ ಚಾಲನೆ, ಶಿಮುಲ್‌ ಹಾಲು ಪ್ಯಾಕಿಂಗ್‌ ಘಟಕ ಉದ್ಘಾಟನೆ, ಮಾಮ್‌ ಕೋಸ್‌ ಆಡಳಿತ ಭವನ ಉದ್ಘಾಟನೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಚಾಲನೆ, ಕೋಟೆಗಂಗೂರು ರೈಲ್ವೆ ಕೋಚಿಂಗ್‌ ಟಿಪೋಗೆ ಶಿಲಾನ್ಯಾಸ, ಜಲಜೀವನ್‌ ಮಷಿನ್‌ ಕಾಮಗಾರಿ ಉದ್ಘಾಟನೆ ನೆರವೇರಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ ವಿಶೇಷತೆ

  • 775 ಎಕರೆ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ
  • ಶಿವಮೊಗ್ಗದ ಸೋಗಾನೆ ಗ್ರಾಮದ ಬಳಿ ನಿರ್ಮಾಣವಾಗಿರುವ ಏರ್‌ಪೋರ್ಟ್‌ನ ವೆಚ್ಚ ಬರೋಬ್ಬರಿ 384 ಕೋಟಿ ರೂಪಾಯಿ.
  • ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್‌ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದೆ. 3,200 ಮೀಟರ್ ಉದ್ದದ ರನ್‌ವೇ ಕಾಮಗಾರಿ ಪೂರ್ಣಗೊಂಡಿದೆ.
  • ಗಂಟೆಗೆ ಸುಮಾರು 300 ಪ್ರಯಾಣಿಕರನ್ನು ನಿಭಾಯಿಸುವಷ್ಟು ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ ಸುಸಜ್ಜಿತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!