ಪ್ರಧಾನಿ ಮೋದಿಯ ಸಂವೇದನಾಶೀಲ ಮನ- ಕಾಶಿಧಾಮದಲ್ಲಿ ಬರಿಗಾಲಲ್ಲಿರಬೇಕಾದವರಿಗೆ ಕಳುಹಿಸಿದರು ನಾರಿನ ಪಾದರಕ್ಷೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹೊಸರೂಪದಲ್ಲಿ ಭವ್ಯವಾಗಿರುವ ಕಾಶಿಧಾಮದಲ್ಲಿ ನಿರ್ವಹಣೆಗೆ ಕೆಲಸಗಾರರು ಇರುವುದು ಸರಿಯಷ್ಟೆ. ಆದರೆ, ಅದು ದೇವಾಲಯ ಪ್ರಾಂಗಣ. ಹೀಗಾಗಿ, ಅವರು ನಿತ್ಯ ಬಳಸುವ ಚರ್ಮದ ಅಥವಾ ರಬ್ಬರಿನ ಚಪ್ಪಲಿಗಳನ್ನು ಬಳಸಲಾರರು. ಹಾಗೆಂದೇ ಅವರೆಲ್ಲ ಇಡೀ ದಿನ ಬರಿಗಾಲಿನಲ್ಲೇ ಇರುತ್ತಿದ್ದರು.

ಉತ್ತರ ಭಾರತದ ಹವಾಮಾನ ಗೊತ್ತಲ್ಲ… ಚಳಿಗಾಲದಲ್ಲಿ ನೆಲವೂ ತಣ್ಣಗೆ ಕೊರೆಯುವಂತಿರುತ್ತದೆ, ಬೇಸಿಗೆಯಲ್ಲಿ ಧಗೆಯೂ ಅಧಿಕ. ಇಂಥದೊಂದು ಸನ್ನಿವೇಶವನ್ನು ಅರ್ಥಮಾಡಿಕೊಂಡವರು ವಾರಾಣಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ. ಅವರು ಅಲ್ಲಿನ ಕೆಲಸಗಾರರಿಗೆ ಚೆಂದದ ನಾರಿನ ಪಾದರಕ್ಷೆಗಳನ್ನು ಕಳಿಸಿರುವುದು ಈಗ ಪ್ರಶಂಸೆಗೆ ಎಡೆಮಾಡುತ್ತಿದೆ.

 

ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯಲ್ಲಿ ಅದರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರ ಮೇಲೆ ಪುಷ್ಪಾರ್ಚನೆಗೈದು ಅವರೊಂದಿಗೇ ಊಟ ಮಾಡಿದ್ದರು ಪ್ರಧಾನಿ ಮೋದಿ. ಅವರ ಗಮನ ದೇವಾಲಯ ಸಂಕೀರ್ಣದಲ್ಲಿ ಸ್ವಚ್ಛತೆ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡ ಕೆಲಸಗಾರರ ಕಾಲಿನ ಮೇಲೂ ಬಿದ್ದಿರುವುದು ಹಾಗೂ ಅವರು ಈ ನಿಟ್ಟಿನಲ್ಲಿ ತಮ್ಮೆಲ್ಲ ಕೆಲಸಗಳ ನಡುವೆ ಸಂವೇದನಾಶೀಲರಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಿಸುವುದು ಮನಮುಟ್ಟುವಂತಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!