ಭಾರತದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ

– ಪಂಡಿತ್ ಅಜೋಯ್ ಚಕ್ರಬರ್ತಿ
ಪದ್ಮಭೂಷಣ ಪುರಸ್ಕೃತ ಖ್ಯಾತ ಗಾಯಕ

ನಮ್ಮ ದೇಶದ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ರಾಜಕಾರಣಗಳ ಸುದೀರ್ಘ ಪಟ್ಟಿಯೇ ಇದೆ. ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಂತೆ ಹುದ್ದೆ ನಿರ್ವಹಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಅಥವಾ ವಿವಿಧ ವಲಯಗಳಲ್ಲಿ ವಿಶಿಷ್ಟವಾಗಿ ಪ್ರಸ್ತುತಪಡಿಸಿದವರು ಬಹುಶಃ ಯಾರೂ ಇಲ್ಲ. ಅವರು ಭೌಗೋಳಿಕ, ಧಾರ್ಮಿಕ, ಜನಸಾಂಖ್ಯಿಕ, ಐತಿಹಾಸಿಕ, ಶೈಕ್ಷಣಿಕ, ವಿಜ್ಞಾನ-ತಂತ್ರಜ್ಞಾನ, ತತ್ವಶಾಸ್ತ್ರ, ಕಲೆ ಮತ್ತು ಸಂಸ್ಕೃತಿ ಹೀಗೆ ವಿವಿಧ ಮುಖಗಳಲ್ಲಿ ಭಾರತದ ವೈಶಿಷ್ಠ್ಯವನ್ನು ಜಗತ್ತಿಗೆ ಸಾರಿದ ಪ್ರಮುಖರ ಸಾಲಿಗೆ ಸೇರುತ್ತಾರೆ.

ಭಾರತ ಉಪಖಂಡ, ಹಿಂದಿನ ಅವಿಭಜಿತ ಭಾರತ, ಕೇವಲ ತನ್ನ ಭೌಗೋಳಿಕ ವಿಸ್ತಾರಕ್ಕೆ ಮಾತ್ರ ಖ್ಯಾತವಾಗಿರಲಿಲ್ಲ, ಇಲ್ಲಿನ ಬೌದ್ಧಿಕ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಗೂ ಹೆಸರುವಾಸಿಯಾಗಿತ್ತು. ಹೀಗಾಗಿ, ನವಭಾರತದ ನಾಯಕರಾಗಿ ಶ್ರೀ.ಮೋದಿ ಅವರ ಪಾತ್ರದ ಆಳ ಮತ್ತು ಅಗಲ ಮೌಲ್ಯಮಾಪನ ಮಾಡುವ ಮೊದಲು, ವಿಶ್ವದ ಬೇರೆ ದೇಶಗಳಿಗಿಂತ ಭಾರತ ಹೇಗೆ ಭಿನ್ನ ಎಂಬುದರ ಬಗ್ಗೆ ತಿಳಿಯುವುದು ಅಗತ್ಯ.

ಶೂನ್ಯ ಕಂಡುಹಿಡಿದಿದ್ದು ಭಾರತ. ನಂತರದ್ದು ಸಂಖ್ಯಾ ವ್ಯವಸ್ಥೆ – ಇದು ದೇಶದ ಇತಿಹಾಸದ ಅತಿ ದೊಡ್ಡ ಸಂಶೋಧನೆ. ದಶಮಾಂಶ ವ್ಯವಸ್ಥೆ (Decimal System), ಪೈ ಮೌಲ್ಯ(Value of pi), ಬೀಜ ಗಣಿತ(Algebra), ತ್ರಿಕೋನಮಿತಿ(Trigonometry), ಕಲನಶಾಸ್ತ್ರ (Calculus), ಮತ್ತು ಇನ್ನೂ ಅನೇಕ ಗಣಿತ ಸೂತ್ರಗಳು ಹುಟ್ಟಿದ್ದು ಭಾರತದಲ್ಲೇ. ಪ್ರಾಚೀನ ಭಾರತದ ಜ್ಞಾನ ಮೂಲಗಳ ಬಗ್ಗೆ ಮಾತನಾಡುತ್ತಾ ಹೋದರೆ, ಅದಕ್ಕೆ ಕೊನೆಯೇ ಇಲ್ಲ.  ಕೆಲವು ಉದಾಹರಣೆಗಳ ಪೈಕಿ 18 ವಿದ್ಯೆಗಳನ್ನು ಉಲ್ಲೇಖಿಸಬಹುದು – ನಾಲ್ಕು ವೇದಗಳು, ನಾಲ್ಕು ಉಪವೇದಗಳು (ಆಯುರ್ವೇದ – ಔಷಧ, ಧನುರ್ವೇದ – ಶಸ್ತ್ರಾಸ್ತ್ರ, ಗಂಧರ್ವವೇದ – ಸಂಗೀತ ಮತ್ತು ಶಿಲ್ಪ – ಕಲೆ), ಪುರಾಣ, ನ್ಯಾಯ, ಮೀಮಾಂಸ, ಧರ್ಮಶಾಸ್ತ್ರ ಮತ್ತು ವೇದಾಂಗ, ಆರು ಆನುಷಂಗಿಕ ವಿಜ್ಞಾನಗಳು, ಧ್ವನಿಶಾಸ್ತ್ರ, ವ್ಯಾಕರಣ, ಮಾಪಕ, ಖಗೋಳಶಾಸ್ತ್ರ, ಆಚರಣೆಗಳು ಮತ್ತು ತತ್ವಶಾಸ್ತ್ರ.

ಆಧುನಿಕ ವಿಜ್ಞಾನ, ನ್ಯೂಟನ್ ಕಾಲದಷ್ಟು ಹಿಂದಿನದು. ಆದರೆ ಪಾರಂಪರಿಕ ಜ್ಞಾನ ವ್ಯವಸ್ಥೆ ಎರಡು ದಶಲಕ್ಷ ವರ್ಷಗಳಿಂತ ಹಿಂದಿನದ್ದಾಗಿದೆ. ಪ್ರಕೃತಿಯೊಂದಿಗೆ ಸಂವಹನ ಸಾಧಿಸುತ್ತಾ ಹೋಮೋ ಹ್ಯಾಬಿಲಿಸ್ ಸಾಧನಗಳನ್ನು ತಯಾರು ಮಾಡಲು ಆರಂಭಿಸಿದ ಕಾಲವದು. ಇತಿಹಾಸದ ಉದಯವಾದಾಗಿನಿಂದ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಶಾಖೆಗಳಿಗೆ ಅನೇಕ ಜನರು ಕೊಡುಗೆ ನೀಡಿದ್ದು ಅನೇಕ ಬಾರಿ, ಅತಿ ದೂರದಲ್ಲಿರುವ ವಿಭಿನ್ನ ಸಂಸ್ಕೃತಿಗಳ ಸಂಪರ್ಕಗಳನ್ನು ಸಮ್ಮಿಳಿತಗೊಂಡಿರುವುದನ್ನು ಗಮನಿಸಬಹುದು. ಸಂಶೋಧಕರು ಅಪಾರ ದೂರದ ನಡುವಿನ ಸಂಸ್ಕೃತಿಗಳ ವಲಸೆ ಮತ್ತು ಜಾಗತಿಕ ವ್ಯಾಪಾರ ವಿಸ್ತೃತವಾಗಿ ಈ ಸಂವಾದಾತ್ಮಕ ಪ್ರಭಾವ ಇನ್ನಷ್ಟು ಸ್ಪಷ್ಟವಾಗುತ್ತಾ ಸಾಗಿದೆ.

ಭಾರತದ ನಾಗರಿಕತೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸದೃಢವಾಗಿದ್ದುದನನ್ನು ನೋಡಬಹುದು. ಪ್ರಾಚೀನ ಭಾರತ, ಋಷಿ-ಮುನಿಗಳ ಬೀಡಾಗಿತ್ತು ಮಾತ್ರವಲ್ಲ, ವಿದ್ವಾಂಸರು ಮತ್ತು ವಿಜ್ಞಾನಿಗಳ ನೆಲೆಯೂ ಆಗಿತ್ತು. ವಿಶ್ವದ ಅತ್ಯುತ್ತಮ ಉಕ್ಕು ತಯಾರಿಸುವುದರಿಂದ ಹಿಡಿದು ವಿಶ್ವಕ್ಕೆ ಎಣಿಸುವುದನ್ನು ಕಲಿಸಿಕೊಟ್ಟಿದ್ದು ಭಾರತ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಆಧುನಿಕ ಪ್ರಯೋಗಾಲಯಗಳು ಸ್ಥಾಪನೆಯಾಗುವ ಶತಶತಮಾನಗಳು ಮೊದಲೇ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ವಲಯಕ್ಕೆ ಅಪಾರ ಕೊಡುಗೆ ನೀಡಿದೆ. ಪ್ರಾಚೀನ ಭಾರತೀಯರು ತಿಳಿಸಿಕೊಟ್ಟಿರುವ ಅನೇಕ ಸಿದ್ಧಾಂತಗಳು ಮತ್ತು ಕಂಡುಹಿಡಿದಿರುವ ಅನೇಕ ತಂತ್ರಗಳು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಭೂತ ಅಂಶಗಳನ್ನು ಬಲಪಡಿಸಿವೆ.

ಆದಾಗ್ಯೂ, ಭಾರತದ ಉಪಖಂಡದ ವ್ಯಾಪಕ ಮಹತ್ವದ ಕೊಡುಗೆಗಳನ್ನು ನಿರ್ಲಕ್ಷಿಸಲಾಗಿದೆ.  ಕ್ರಿಸ್ತಪೂರ್ವ ಮೂರನೇ ಸಹಸ್ರಮಾನದಲ್ಲಿ ಬ್ರಿಟಿಷರು ಇನ್ನೂ ತಮ್ಮ ನಾಗರಿಕತೆಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದ್ದಾಗ ಭಾರತದ ನಾಗರಿಕತೆ ಉನ್ನತವಾಗಿತ್ತು ಎಂಬುದನ್ನು  ಬ್ರಿಟಿಷ್ ವಸಾಹತುಶಾಹಿಗಳು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಈ ಮೇಲೆ ತಿಳಿಸಿರುವ ಅಂಶಗಳು ವಿಶಾಲ ಸಾಗರದ ಪಕ್ಕದಲ್ಲಿರುವ ಒಂದು ಹನಿ ಮಾತ್ರ.

ಹೀಗಾಗಿ ಭಾರತದ ಹೆಮ್ಮೆ ಶ್ರೀ ಮೋದಿ ಅವರು ದೀರ್ಘಕಾಲದ ಭಾರತದ ಸಾಧನೆಗಳನ್ನು ಪ್ರದರ್ಶಿಸುವ ಬುದ್ಧಿವಂತಿಕೆಯ ನಿರ್ಧಾರ ಮಾಡಿದ್ದಾರೆ.

ನಮ್ಮ ಮಾನ್ಯ ಪ್ರಧಾನಮಂತ್ರಿಗಳು, ಅವರ “ಮನದ ಮಾತು” ಕಾರ್ಯಕ್ರಮ ಸರಣಿಗಳಲ್ಲಿ ಬಹುಜನರ ಸಮಸ್ಯೆಗಳನ್ನು ಮತ್ತು ಘಟನೆಗಳನ್ನು ಸತತವಾಗಿ ಪ್ರಸ್ತಾಪಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಇಡೀ ವಿಶ್ವಕ್ಕೆ ಭಾರತದ ಅದ್ಭುತ ಸಾಧನೆಗಳ ಪರಿಚಯವಾಗಿ ನಮ್ಮ ದೇಶದತ್ತ ಅವರು ಆಕರ್ಷಿತರಾಗುತ್ತಿದ್ದಾರೆ. ಈ ಎಲ್ಲವನ್ನೂ ಮಾಡುವಾಗ, ಪ್ರಧಾನಮಂತ್ರಿ ವಿಶೇಷವಾಗಿ ಮುರು ವಿಷಯಗಳ ಬಗ್ಗೆ ಒತ್ತು ನೀಡುತ್ತಾರೆ. ಮೊದಲನೆಯದು, ಏಕತೆಯ ಭಾವ ಮೂಡಿಸುವುದು ಅಥವಾ ಜಾತಿ, ಮತ, ಆರ್ಥಿಕ ಸ್ಥಿತಿಯ ಭೇದವಿಲ್ಲದೇ ಎಲ್ಲಾ ಭಾರತೀಯರು ಒಂದು ಎಂಬ ಭಾವನೆ; ಎರಡನೆಯದು, ಭಾರತೀಯರು ಎಂಬ ಹೆಮ್ಮೆಯ ಭಾವ ಮೂಡಿಸುವುದು. ಇದಕ್ಕಾಗಿ ಶ್ರೀ ಮೋದಿ ಅವರು, ಬ್ರಿಟಿಷರ ವಿರುದ್ಧ ಹೋರಾಡಿ, ಪರಕೀಯರ ದಾಸ್ಯದಿಂದ ಮುಕ್ತಗೊಳಿಸಲು ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸುವಂತೆ ದೇಶವಾಸಿಗಳಿಗೆ ಸ್ಪಷ್ಟ ಕರೆ ನೀಡಿದ್ದಾರೆ. ಮೂರನೆಯದಾಗಿ. ನಮ್ಮ ತ್ರಿವರ್ಣದ ಬಗ್ಗೆ ಎಲ್ಲಾ ನಾಗರಿಕರಲ್ಲಿ ಪ್ರೀತಿ ಮತ್ತು ವಿಶ್ವಾಸದ ಭಾವ ಇರುವುದು. ಇದಕ್ಕಾಗಿ, ಎಲ್ಲಾ ನಾಗರಿಕರು ಮತ್ತು ಎಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಲ್ಲದೇ ತಮ್ಮ ತಮ್ಮ ಮನೆಗಳಲ್ಲೂ “ರಾಷ್ಟ್ರ ಧ್ವಜ” ಹಾರಿಸುವಂತೆ ಕರೆ ನೀಡಿದರು. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವರ “ಹರ್ ಘರ್ ತಿರಂಗಾ” ಕರೆ, ದೇಶಾದ್ಯಂತ ಜನರ ಭಾಗವಹಿಸುವಿಕೆಯ ಭಾವವನ್ನು ಮೂಡಿಸುವಲ್ಲಿ ನೆರವಾಗಿತ್ತು.

“ಮೇಕ್ ಇನ್ ಇಂಡಿಯಾ” ಘೋಷವಾಕ್ಯದಡಿ ಎಲ್ಲಾ ಭಾರತೀಯರ ಸ್ಥಳೀಯ ಪ್ರಯತ್ನಗಳು ಅರಳುವಂತಾಗಲು ಪ್ರಧಾನಮಂತ್ರಿ ಒತ್ತು ನೀಡಿದರು. ಅವುಗಳೆಂದರೆ, ಆಯುಷ್ (ಸಮಗ್ರ ಆರೋಗ್ಯಕ್ಕಾಗಿ ಪಾರಂಪರಿಕ ಸಂಪತ್ತು), ರಾಷ್ಟ್ರೀಯ ಜೇನು ಸಾಕಾಣಿಕ ಮತ್ತು ಜೇನು ಅಭಿಯಾನ (ಭಾರತದಲ್ಲಿ ಸಿಹಿ ಕ್ರಾಂತಿಯ ಪೋಷಣೆ), ಭಾರತೀಯ ಸ್ವದೇಶಿ ಆಟಿಕೆಗಳು (ಆತ್ಮನಿರ್ಭರದ ಯಶೋಗಾಥೆ) ಇತ್ಯಾದಿ. ಶ್ರೀ.ಪಿಂಗಳಿ ವೆಂಕಯ್ಯನವರು ಭಾರತದ ರಾಷ್ಟ್ರ ಧ್ವಜದ ರಚನಕಾರರು ಎಂಬುದನ್ನು ಗುರುತಿಸಿದ ಮೊದಲ ಪ್ರಧಾನಮಂತ್ರಿ ಶ್ರೀ.ಮೋದಿ ಅವರು ಎಂಬುದು ತಿಳಿದು ನನಗೆ ಅತೀವ ಸಂತೋಷವಾಗಿದೆ.  “ಆಜಾದಿ ಕಾ ಅಮೃತ್ ಮಹೋತ್ಸವ್” ದಿಂದಾಗಿ ಇಡೀ ದೇಶಕ್ಕೆ ಇದರ ಬಗ್ಗೆ ಅರಿವು ಮೂಡಿದೆ. ಇದು ತಮ್ಮ ಕುಟುಂಬಕ್ಕೆ ಅತಿದೊಡ್ಡ ಗೌರವ ಎಂದು ವೆಂಕಯ್ಯ ಅವರ ಮೊಮ್ಮೊಗ ಘಂಟಸಾಲಾ ಗೋಪಿಕೃಷ್ಣ ಬಣ್ಣಿಸಿದ್ದಾರೆ.

ರೈಲ್ವೆ ಸಚಿವಾಲಯದ ಮಾದರಿ ಸಪ್ತಾಹ ಆಚರಣೆ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಾದ “ಆಜಾದಿ ಕಾ ರೈಲ್ ಗಾಡಿ ಔರ್ ಸ್ಟೇಷನ್ಸ್’ (ಸ್ವಾತಂತ್ರ್ಯದ ರೈಲು ಗಾಡಿ ಮತ್ತು ನಿಲ್ದಾಣಗಳು) ಎಂಬ ಶ್ರೀ.ಮೋದಿ ಅವರ ಮೊತ್ತೊಂದು ಉಪಕ್ರಮ ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದೆ. ದೇಶಾದ್ಯಂತ ಸ್ವಾತಂತ್ರ್ಯ ಸಂಗ್ರಾಮ ನಡೆದ ಸ್ಥಳಗಳನ್ನೊಳಗೊಂಡ 75 ನಿಲ್ದಾಣಗಳನ್ನು ಗುರುತಿಸಲಾಗಿತ್ತು ಮತ್ತು 27 ರೈಲುಗಳನ್ನು “ಸ್ಪಾಟ್ ಲೈಟ್ ರೈಲುಗಳು” ಎಂದು ಗುರುತಿಸಲಾಗಿತ್ತು. ರೈಲು ವಾರ ಪೂರ್ತಿ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಎಲ್ಲಾ 75 ನಿಲ್ದಾಣಗಳನ್ನು ಅಲಂಕರಿಸಲಾಗಿತ್ತು. ದೇಶಭಕ್ತಿ ಗೀತ ಗಾಯನ ಮತ್ತಿತರ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಭಾರತದ ವೈವಿಧ್ಯಮಯ ಮತ್ತು ರೋಮಾಂಚನಕಾರಿ ಸಂಸ್ಕೃತಿಯ ಅಭಿಯಾನಿಯಾದ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಭಾರತ ಕೇವಲ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮಾತ್ರವಲ್ಲ, ಸಾಂಸ್ಕೃತಿಕ ಪುನರುಜ್ಜೀವಕ್ಕೂ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕೂ ದೇಶದ ಸಕಾರಾತ್ಮಕ ಪರಿವರ್ತನೆಯ ಹಾದಿಯಲ್ಲಿ ಭಾಗಿಯಾಗುವಲ್ಲಿ, “ಮನ್ ಕಿ ಬಾತ್” ಯಶಸ್ವಿ ವೇದಿಕೆಯಾಗಿದೆ ಎಂಬುದು ಸಾಬೀತಾಗಿದೆ.

ನಮ್ಮ ದೂರದೃಷ್ಟಿಯ ಪ್ರಧಾನಮಂತ್ರಿಗಳು, ಮುಂದಿನ 25 ವರ್ಷಗಳನ್ನು “ಕರ್ತವ್ಯದ ಕಾಲ” ಎಂದು ಗುರುತಿಸಿ, ಪ್ರತಿಯೊಬ್ಬ ದೇಶವಾಸಿಗಳು ಈ ಮಹೋತ್ಸವವನ್ನು ಜನಾಂದೋಲನವಾಗಿ ಪರಿವರ್ತಿಸಲು ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದ್ದಾರೆ. ಹೀಗೆ ದೇಶ ಕಷ್ಟಪಟ್ಟು ಗಳಿಸಿರುವ ಸ್ವಾತಂತ್ರ್ಯವನ್ನು ರಕ್ಷಿಸುತ್ತಾ ಭವ್ಯ ಶತಮಾನೋತ್ಸವದೆಡೆಗೆ ಮುನ್ನಡೆಯುವಂತೆ ಕರೆ ನೀಡಿದ್ದಾರೆ. ಮುಂದಿನ ಪೀಳಿಗೆಯ ಎಲ್ಲರ ಮುಖಗಳಲ್ಲಿ ಈ ಅದ್ಭುತ ಶೌರ್ಯದ ಬೀಡಿನಲ್ಲಿ ನಗು ನಲಿಯುವಂತೆ ಮಾಡೋಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!