Friday, June 2, 2023

Latest Posts

ಸುಧಾಮೂರ್ತಿ ಲೇಖನ- ಮನ್ ಕೀ ಬಾತ್ ನಲ್ಲಿ ಮಹಿಳೆಯ ಯಶೋಗಾಥೆ ಹಂಚಿದ ಮೋದಿಜಿ

-ಸುಧಾ ಮೂರ್ತಿ
 ಖ್ಯಾತ ಲೇಖಕಿ

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ…
ಈ ಶ್ಲೋಕವನ್ನು ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಸ್ತ್ರೀಶಕ್ತಿಯನ್ನು ಚೆನ್ನಾಗಿ ತಿಳಿದಿದ್ದ, ಅರ್ಥ ಮಾಡಿಕೊಂಡಿದ್ದ ಕಾಲದಲ್ಲಿ ಬರೆದಿದ್ದಾರೆ. ‘ಮಹಿಳೆಯರು’ ಎಂದರೆ ಕೇವಲ ಸ್ತ್ರೀಲಿಂಗವಲ್ಲ, ಆದರೆ ಅದಕ್ಕಿಂತ ಹೆಚ್ಚಿನ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ. ಅವರು ಅರ್ಧದಷ್ಟು ಸಮಾಜ ಮತ್ತು ಕುಟುಂಬದ ಬೆನ್ನೆಲುಬಾಗಿದ್ದಾರೆ. ಮಹಿಳೆಯರನ್ನು ಎಲ್ಲಿ ಗೌರವಿಸಿ ಮತ್ತು ಅವರ ಸ್ಥಾನಮಾನ ಆನಂದಿಸುತ್ತಾರೋ ಅಲ್ಲಿ ದೇವರುಗಳು ನೆಲೆಸಿರುತ್ತಾರೆ. ಆದರೆ ಶತಮಾನಗಳ ಕಾಲದಿಂದಲೂ ವಿವಿಧ ಕಾರಣಗಳಿಗಾಗಿ ನಮ್ಮ ಮಹಿಳೆಯರನ್ನು ಭಿನ್ನವಾಗಿ ಮನೆಯೊಳಗೆ ಇರಿಸಲಾಗಿದೆ.
ಪ್ರಾಚೀನ ಭಾರತದಲ್ಲಿ, ಮಹಿಳೆಯರನ್ನು ಸಹ ಪುರುಷರಿಗೆ ಸಮಾನವಾಗಿ ಕಾಣಲಾಗುತ್ತಿತ್ತು. ಬೌದ್ಧಿಕ ಚರ್ಚೆಗಳು, ಆಡಳಿತ, ಆಸ್ತಿ ಉತ್ತರಾಧಿಕಾರ, ಪಾಂಡಿತ್ಯಪೂರ್ಣ ಜ್ಞಾನ ಇತ್ಯಾದಿ ವಿಚಾರಗಳಲ್ಲಿ ಮುಕ್ತ ಅವಕಾಶಗಳನ್ನು ನೀಡಲಾಗುತ್ತಿತ್ತು. ತದನಂತರ ಮಹಿಳೆಯರಿಗೆ ಶಿಕ್ಷಣ, ಸಾಮಾಜಿಕ ಸ್ಥಾನಮಾನ ಮತ್ತು ಹೆಚ್ಚಿನ ಮಟ್ಟಿಗೆ ಅವಳ ಅಸ್ತಿತ್ವವನ್ನು ನಿರಾಕರಿಸಲಾಯಿತು. ಅವಳು ಮಗಳಾಗಿ, ಪತ್ನಿಯಾಗಿ ಅಥವಾ ತಾಯಿಯಾಗಿ ಮಾತ್ರ ಗುರುತಿಸಲ್ಪಡುತ್ತಿದ್ದಳು. ಸಮಾನತೆ ಮತ್ತು ಧೈರ್ಯದ ವೈಭವವನ್ನು ಕಳೆದುಕೊಂಡಳು.
ಹೆಂಗಸರು ಮರಕ್ಕೆ ಕಟ್ಟಿದ ಆನೆಗಳಂತೆ ಎಂಬುದು ನನ್ನ ಭಾವನೆ. ಆನೆಗೆ ಮರವನ್ನು ಕಿತ್ತೊಗೆಯುವುದು ದೊಡ್ಡ ವಿಷಯವಲ್ಲ, ಅವಳು ಅದನ್ನು ಸುಲಭವಾಗಿ ಮಾಡಬಲ್ಲಳು. ಆದರೆ ಆನೆಯು ತನ್ನನ್ನು ಸರಪಳಿಯಲ್ಲಿ ಬಂಧಿಸಲಾಗಿದೆ ಎಂದು ಭಾವಿಸುತ್ತದೆ ಹೊರತು ಅದು ತನ್ನ ಶಕ್ತಿ ಸಾಮರ್ಥ್ಯವನ್ನು ಹೊರಹಾಕುವುದಿಲ್ಲ. ಹಾಗೆಯೇ ಮಹಿಳೆಯರು ಸಹ. ಅವರು ಉತ್ತಮ ನಿರ್ವಾಹಕರಾಗಿದ್ದಾರೆ, ಕುಟುಂಬದ ಮೂಲವಾಗಿದ್ದಾರೆ, ಕಠಿಣ ಕೆಲಸ ಅಭ್ಯಾಸಗಳಿಗೆ ಮಹಿಳೆಯರು ಮತ್ತೊಂದು ಹೆಸರು. ಆದರೆ ಅವರು ತಮ್ಮ ಅಧಿಕಾರವನ್ನು ಚಲಾಯಿಸಲು ಅಥವಾ ತಮ್ಮ ಸಾಮರ್ಥ್ಯವನ್ನು ಹೊರಹಾಕಲು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿಯಲ್ಲಿ ಸರಪಳಿಯಲ್ಲಿ ಬಂಧಿಸಲ್ಪಟ್ಟಿದ್ದಾರೆ.
ಯಾವುದೇ ಚಂಡಮಾರುತ ಅಥವಾ ಅಲೆಯನ್ನು ದಿಟ್ಟವಾಗಿ ಎದುರಿಸಲು ಆರಂಭಿಕ ಹಂತವು ಅಗತ್ಯವಾಗಿರುತ್ತದೆ. ಏಕೆಂದರೆ ಆ ರೀತಿಯಲ್ಲಿ ಯೋಚಿಸುವುದು ಸಾಧ್ಯವಿದೆ. ಈ ಹಂತವು ಹೇಗೆ ಬರುತ್ತದೆ, ಅವರಿಗೆ ಯಾರು ಸಹಾಯ ಮಾಡುತ್ತಾರೆ, ಯಾರು ಅವರಿಗೆ ವಿಶ್ವಾಸ ತುಂಬುತ್ತಾರೆ, ಅವರಿಗೆ ಸಹಾಯ ಮಾಡಲು ಯಾರು ನೀತಿಯನ್ನು ರೂಪಿಸುತ್ತಾರೆ ಅಥವಾ ಮೊದಲ ಬಾರಿಗೆ ಅವಳ ಸಾಮರ್ಥ್ಯವನ್ನು ಯಾರು ಹೊರಹಾಕುತ್ತಾರೆ? ಆಕೆ  ಹೊಗೆಯಾಡುತ್ತಿರುವ ಅಡುಗೆ ಮನೆಯಿಂದ ಹೊರಬರಲು ಯಾರು ಒಪ್ಪಿಕೊಳ್ಳುತ್ತಾರೆ, ಆಕೆ ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದಾಗ ಯಾರು ಸಹಾಯಹಸ್ತ ನೀಡಬಲ್ಲರು? ಕ್ರೀಡೆ, ಆರೋಗ್ಯ, ರಕ್ಷಣೆ, ವಾಯುಯಾನ ಕ್ಷೇತ್ರದಲ್ಲಿ ಆಕೆಯ ಸಾಮರ್ಥ್ಯವನ್ನು ಯಾರು ಶ್ಲಾಘಿಸುತ್ತಾರೆ?
ಇದನ್ನೆಲ್ಲಾ ಒಂದು ಬಾರಿ ಮಾಡಿದ್ದೇ ಆದರೆ, ಅವಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಅಪಾರ ಸಾಮರ್ಥ್ಯದೊಂದಿಗೆ ಸ್ವತಃ ಬೆಳೆಯುತ್ತಾಳೆ.
ಮಹಿಳೆಯರ ಬಗ್ಗೆ ಮಾತನಾಡುವ ಮತ್ತು ಹೆಣ್ಣು ಮಕ್ಕಳು ದೇವರ ಅಮೂಲ್ಯ ಕೊಡುಗೆ ಎಂದು ಅರಿವು ಮೂಡಿಸುವ ಸರಿಯಾದ (ಉತ್ತಮ) ನಾಯಕನೊಂದಿಗೆ ಈ ಅದ್ಭುತ ರೂಪಾಂತರವು ಅವರಿಗೆ ಸಂಭವಿಸಿದೆ. ನಾಯಕನು ತನ್ನ ದೇಶದ ಎಲ್ಲಾ ಸಾಮಾನ್ಯ ಪುರುಷರು ಮತ್ತು ಮಹಿಳೆಯರೊಂದಿಗೆ ಉತ್ತಮ ಜೀವನ ಮತ್ತು ನೈಜ ಉದಾಹರಣೆಗಳೊಂದಿಗೆ ಕಾರ್ಯಕ್ರಮದ ಮೂಲಕ ಮಾತನಾಡಲು ಪ್ರಾರಂಭಿಸಿದನೆಂದರೆ, ಅವರು ಸರಿಯಾದ ಭರವಸೆ ನೀಡಿದರೆಂದೇ ಅರ್ಥ, ಸರಿಯಾದ ಮಾತುಗಳೊಂದಿಗೆ ಮತ್ತು ಸರಿಯಾದ ದಿಕ್ಕಿನಲ್ಲಿ ಅನುಸರಿಸಿದರು ಎಂದೇ ಅರ್ಥ. ಅದು ‘ಬೇಟಿ ಬಚಾವೋ ಬೇಟಿ ಪಢಾವೋ’ ಆಗಿರಬಹುದು, ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯೇ ಆಗಿರಬಹುದು,  ‘ಉಜ್ವಲ ಯೋಜನೆ’ಯೇ ಆಗಿರಬಹುದು ಅಥವಾ ‘ಸ್ವಚ್ಛ ಭಾರತ್ ಮಿಷನ್’, ‘#ಮಗಳ ಜೊತೆ ಸೆಲ್ಫಿ’, ಇತ್ಯಾದಿ ಇರಬಹುದು.
ನಾರಿ(ಸ್ತ್ರೀ) ಶಕ್ತಿಯನ್ನು ಪ್ರೋತ್ಸಾಹಿಸಿದವರು ಯಾರು? ದೇಶದ ರಾಷ್ಟ್ರೀಯ ಸಂಪತ್ತನ್ನು ಹೆಚ್ಚಿಸುಸುವಲ್ಲಿ ಅವರು ಜವಾಬ್ದಾರರು ಎಂದು ನೆನಪಿಸಿಕೊಳ್ಳುವಂತೆ ಮಾಡಿದವರು ಯಾರು? ಮಕ್ಕಳು ಪರೀಕ್ಷೆಗೆ ಹೆದರುವುದು, ಪೋಷಕರ ಒತ್ತಡ, ಮಹಿಳಾ ಸಬಲೀಕರಣ (ನಾರಿಶಕ್ತಿ) ಮುಂತಾದ ವಿವಿಧ ಸಾಮಾಜಿಕ ಸಮಸ್ಯೆಗಳನ್ನು 2014ರಲ್ಲಿ ಪ್ರಾರಂಭವಾದ ‘ಮನ್ ಕಿ ಬಾತ್’ ಸಂಚಿಕೆಗಳೊಂದಿಗೆ ಈ ನಾಯಕ ಅದನ್ನು ಮಾಡಿದ್ದಾರೆ.
ಆ ನಾಯಕ ಬೇರೆ ಯಾರೂ ಅಲ್ಲ, ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ.

ನಮ್ಮ ದೇಶದ ಸಾಮಾನ್ಯ ಜನರೊಂದಿಗೆ ಸಂಭಾಷಣೆ ನಡೆಸುವ ಪ್ರಸಾರ ಕಾರ್ಯಕ್ರಮವನ್ನು ‘ಮನ್ ಕಿ ಬಾತ್’ ಎಂದು ಕರೆಯುತ್ತೇವೆ. ಅವರು ಜೀವನದ ವಿವಿಧ ಹಂತಗಳ ವಿವಿಧ ಜನರೊಂದಿಗೆ, ವಿವಿಧ ವಿಷಯಗಳು ಮತ್ತು ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ.  ಹಾಡದ, ಕೇಳದ, ಕಾಣದ, ಆದರೆ ದೊಡ್ಡ ರೀತಿಯಲ್ಲಿ ಕೆಲಸ ಮಾಡಿದ ನಿಜವಾದ ಹೀರೋಗಳನ್ನು ಗುರುತಿಸುತ್ತಾರೆ.
ಉತ್ತಮ ನಾಯಕರಾದವರು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಸತತವಾಗಿ ಮಾತನಾಡಿದಾಗ, ಜನರು ಅದನ್ನು ಆಲಿಸುತ್ತಾರೆ, ನಂಬುತ್ತಾರೆ ಮತ್ತು ನಂತರ ಆ ಮಾತುಗಳನ್ನು ಅನುಸರಿಸುತ್ತಾರೆ. ಇಡೀ ದೇಶವು ಅವರ ಬಗ್ಗೆ ಅಪಾರ ನಂಬಿಕೆ ಹೊಂದಿದೆ. ಅವರು ಏನು ಮಾತನಾಡುತ್ತಾರೆ. ಅವರು ಎಂದರೆ, ವಿಶೇಷವಾಗಿ ಅವರ ಮಾತುಕತೆ ಮತ್ತು ಯೋಜನೆಗಳಿಂದ ಬಹಳಷ್ಟು ಪ್ರಯೋಜನ ಪಡೆದ ಮಹಿಳೆಯರು. ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಮಹಿಳೆಯರು ಅಸಾಧಾರಣ ಕೆಲಸ ಮಾಡಿದಾಗ, ಅವರನ್ನು ಕರೆದು ಪ್ರಶಂಸಿಸಲಾಗುತ್ತದೆ. ಆಗ ರಾಷ್ಟ್ರವು ಅವರನ್ನು ಸ್ವೀಕರಿಸುತ್ತದೆ; ಅವರು ಅನೇಕ ಯುವಕರಿಗೆ ಮಾದರಿಯಾಗುತ್ತಾರೆ. ಆದ್ದರಿಂದ ಹೆಣ್ಣು ಮಕ್ಕಳು ಇದೀಗ ಬಹುದೊಡ್ಡ ಕನಸು ಕಾಣುತ್ತಿದ್ದಾರೆ. ಏಕೆಂದರೆ ಸರ್ಕಾರದ ನೀತಿಗಳು ಅವರಿಗೆ ಅನುಕೂಲಕರವಾಗಿವೆ, ಅವರು ಸಾಧಿಸಬಲ್ಲರು ಎಂಬುದು ಮಹಿಳೆಯರಿಗೆ ತಿಳಿದಿದೆ.
ಕೆಲವು ತಿಂಗಳ ಹಿಂದೆ, ನಾನು ನನ್ನ ಕೆಲಸಗಳ ನಿಮಿತ್ತ ಹಳ್ಳಿ ಹಳ್ಳಿಗೆ ಭೇಟಿ ನೀಡಿ, ಮಕ್ಕಳ ಗುಂಪಿನೊಂದಿಗೆ ಸಂವಾದ ನಡೆಸಿದೆ. ನಾವು ಅನೇಕ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ವಿನಿಮಯ ಮಾಡಿಕೊಂಡೆವು. ಅದರಲ್ಲಿ ಅನೇಕ ವಿಭಿನ್ನ ವಿಷಯಗಳು ಒಳಗೊಂಡಿದ್ದವು. ನಮ್ಮ ಮಾತುಕತೆಯ ಕೊನೆಯಲ್ಲಿ, ಗುಂಪಿನಲ್ಲಿರುವ ಯುವತಿಯರಿಗೆ ನಾನು ಕೊನೆಯ ಪ್ರಶ್ನೆ ಕೇಳಿದೆ. ನೀವು ದೊಡ್ಡವರಾದ ನಂತರ ನೀವು ಏನಾಗಬೇಕೆಂದು ಬಯಸಿದ್ದೀರಿ?  ಹೊಳಪು ಕಣ್ಣಿನ ಒಂದು ಹುಡುಗಿ ತಕ್ಷಣವೇ, ‘ನಾನು ಜೋಯಾ ಅಗರ್ ವಾಲ್ ಆಗಬೇಕೆದು ಬಯಸುತ್ತೇನೆ’ ಎಂದು ಹೇಳಿದಳು. ಕುತೂಹಲದಿಂದ ನಾನುಏಕೆ ಎಂದು ಕೇಳಿದೆ. ಅವಳು ಹೇಳಿದಳು… ‘ನೀವು ಟಿವಿ ನೋಡುವುದಿಲ್ಲವೇ, ಪೇಪರ್ ಓದುವುದಿಲ್ಲವೇ? ಜೋಯಾ ಅಗರ್ ವಾಲ್ ಅವರು ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಉತ್ತರ ಧ್ರುವದ ಮೇಲೆ ಹಾರುವ ವಿಮಾನದಲ್ಲಿ ಎಲ್ಲಾ ಮಹಿಳಾ ಪೈಲಟ್ ಗಳಿರುವ ತಂಡವನ್ನು 16,000 ಕಿ.ಮೀ. ದೂರ ವೈಮಾನಿಕ ಸಂಚಾರ ನಡೆಸಿ ಯಶಸ್ವಿಯಾಗಿದ್ದಾರೆ. ಅವರಂತೆ ನಾನು ಸಹ ಪೈಲಟ್ ಆಗಬೇಕೆಂದು ಬಯಸಿದ್ದೇನೆ ಎಂದಳು. ಆ ಬಾಲಕಿ ನಮ್ಮ ಪ್ರಧಾನಿ ಅವರನ್ನು ಭೇಟಿಯಾಗಿ, ತನ್ನ ಮನದ ಇಂಗಿತವನ್ನು ಹೇಳಿಕೊಂಡಿದ್ದಾಳೆ.
ಮತ್ತೊಬ್ಬ ಹುಡುಗಿ “ನಾನು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಯಸುತ್ತೇನೆ, ಏಕೆಂದರೆ ನಾನು ಇತರ ಹುಡುಗಿಯರಿಗೆ ಮಾದರಿಯಾಗಬೇಕು. ಜತೆಗೆ, ಪ್ರಧಾನಿ ಅವರಿಂದ ಗೌರವ ಪಡೆಯಬೇಕು” ಎಂದು ಹೇಳಿದಳು. ಮೂರನೆಯ ಹುಡುಗಿ “ನಾನು ಮಹಿಳಾ ಉದ್ಯಮಿಯಾಗಲು ಬಯಸುತ್ತೇನೆ, ಏಕೆಂದರೆ ಪ್ರಧಾನ ಮಂತ್ರಿಗಳ ಮುದ್ರಾ ಯೋಜನೆಯಂತಹ ದೊಡ್ಡ ಯೋಜನೆಗಳು ನನಗೆ ಸಹಾಯ ಮಾಡುತ್ತವೆ”. ಅವರ ತಾಯಿ ಹೊರಗೆ ಬಂದು, ‘ಮೇಡಂ, ನಮಗೆ ಎಲ್‌ಪಿಜಿ ಸಿಕ್ಕಿದ್ದಕ್ಕಾಗಿ ನಾನು ಪ್ರಧಾನಿ ಜಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಹೊಗೆಯಿಂದ ನನ್ನ ಕಣ್ಣುಗಳನ್ನು ಉಳಿಸಿದೆ ಮತ್ತು ನನ್ನ ಆರೋಗ್ಯವನ್ನು ಸುಧಾರಿಸಿದೆ. ಇನ್ನೊಬ್ಬ ಮಹಿಳೆ ಹೇಳಿದಳು, “ನಾನು ಈಗ ಶೌಚಾಲಯಕ್ಕೆ ಹೋಗುವುದು ಸುರಕ್ಷಿತವಾಗಿದೆ” ಎಂದು.
ಕೆಲವು ವೃದ್ಧ ಮಹಿಳೆಯರು ಮುಂದೆ ಬಂದು ‘ನಾವು ‘ಮನ್ ಕಿ ಬಾತ್’ ಕೇಳುತ್ತೇವೆ, ಆದರೆ ಪ್ರಧಾನಿ ಅವರಿಗೆ ಧನ್ಯವಾದ ಹೇಗೆ ತಿಳಿಸಬೇಕೆಂದು ನಮಗೆ ಗೊತ್ತಾಗುತ್ತಿಲ್ಲ. ಮೇಡಂ, ನೀವು ಅವರನ್ನು ಭೇಟಿಯಾದರೆ ಅಥವಾ ಅವರಿಗೆ ಪತ್ರ ಬರೆದರೆ, ದಯವಿಟ್ಟು ಈ ದೇಶದ ನಿಮ್ಮ ಸಹೋದರಿಯರು ಧನ್ಯವಾದ ಹೇಳಲು ಬಯಸುತ್ತಾರೆ ಎಂದು ಅವರಿಗೆ ತಿಳಿಸಿ ಎಂದರು. ಅವರ ಕಣ್ಣಂಚಿನಲ್ಲೇ ಎಷ್ಟೊಂದು ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಬಯಸುತ್ತಾರೆ ಎಂಬುದು ವೇದ್ಯವಾಯಿತು. ಇದನ್ನು ಯಾವಾಗಲೋ, ಎಲ್ಲೋ, ಹೇಗೋ ಮಾಡುತ್ತೇನೆ ಎಂದು ನಾನು ಅವರಿಗೆ ಹೇಳಿದೆ. ಆದರೆ ನಮ್ಮ ನಾರಿ ಶಕ್ತಿಯಲ್ಲಿನ ಆತ್ಮವಿಶ್ವಾಸದ ರೂಪಾಂತರವನ್ನು ನನ್ನ ಮನಸ್ಸು ಅನಾಯಾಸವಾಗಿ ಗಮನಿಸುತ್ತಿತ್ತು.
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂಬ ಶ್ಲೋಕ ನನಗೆ ಮತ್ತೊಮ್ಮೆ ನೆನಪಾಯಿತು.
 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!