Tuesday, March 28, 2023

Latest Posts

ಬೆಳಗಾವಿಯಲ್ಲಿ ಪ್ರಧಾನಿ ರೋಡ್​ ಶೋ: ಹೂಮಳೆಯಲ್ಲಿ ಮಿಂದೆದ್ದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ರೈಲು ನಿಲ್ದಾಣ ಉದ್ಘಾಟನೆ, ಲೋಂಡಾ, ಬೆಳಗಾವಿ, ಫಟಪ್ರಭಾ ಮಾರ್ಗದ ಡಬ್ಲಿಂಗ್‌ ಲೋಕಾರ್ಪಣೆ ಮಾಡಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Modi at Belagavi) ಅವರು ೧೦.೭ ಕಿ.ಮೀ. ಮೆಗಾ ರೋಡ್‌ ಶೋ ನಡೆಸಿದ್ದಾರೆ.

ಬೆಳಗಾವಿಯ ಎಪಿಎಂಸಿ ಬಳಿಯ ಕೆಎಸ್‌ಆರ್‌ಪಿ ಮೈದಾನದಿಂದ ರಸ್ತೆಯುದ್ದಕ್ಕೂ ಜನರತ್ತ ಕೈಬೀಸುತ್ತಾ ಬರುತ್ತಿರುವ ಪ್ರಧಾನಿ ಮೋದಿಯತ್ತ ಜನರೂ ಉದ್ಘೋಷ, ಜಯಘೋಷಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು.

ದಾರಿಯುದ್ದಕ್ಕೂ ಪ್ರಧಾನಿ ಮೋದಿ ಮೇಲೆ ಪುಷ್ಪ ವೃಷ್ಟಿಯೇ ಸುರಿದಿದೆ.

ಬಿಗಿ ಭದ್ರತೆ ನಡುವೆ ರೋಡ್‌ ಶೋದಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಿಕ್ಕಿರಿದು ನಿಂತಿದ್ದರು. ಬ್ಯಾರಿಕೇಡ್‌ ಆಚೆ ನಿಂತ ಕೆಲವು ಜನರೂ ಸಹ ಕಾರು ಸಾಗುತ್ತಿದ್ದಂತೆ ಆ ಕಡೆಯಿಂದ ಓಡೋಡಿ ಬರುತ್ತಲೇ ಇದ್ದರು. ಅಮೋದಿ ಮೇಲಿನ ಪ್ರೀತಿ, ಅಕ್ಕರೆಯನ್ನು ಜನ ತೋರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!