ಕೇಂದ್ರ ಬಜೆಟ್ ಸಂಬಂಧ ಪ್ರಧಾನಿ ಭಾಷಣ: ಎಲ್ಲ ಜಿಲ್ಲೆಯಲ್ಲಿ ನೇರಪ್ರಸಾರದ ವ್ಯವಸ್ಥೆ ಎಂದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ

ಹೊಸದಿಗಂತ ವರದಿ, ಕಲಬುರಗಿ

ಕೇಂದ್ರ ಬಜೆಟ್ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಫೆ. 2ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸ್ಕ್ರೀನ್ ಹಾಕಿ ಆನ್‍ಲೈನ್ ಮೂಲಕ ಪ್ರಸಾರ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ತಿಳಿಸಿದರು.

ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಪ್ರಧಾನ ಮಂತ್ರಿಗಳು ಕಾರ್ಯಕರ್ತರು ಮತ್ತು ಹಿತೈಷಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಈ ಭಾಷಣ ಕೇಳಲು ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ 150ಕ್ಕೂ ಹೆಚ್ಚು ಕಾರ್ಯಕರ್ತರು, ಸಂಸದರು, ಶಾಸಕರು, ಸಚಿವರು ಭಾಗವಹಿಸಲಿದ್ದಾರೆ. ಆರ್ಥಿಕ ತಜ್ಞರೂ ಭಾಗವಹಿಸುವರು ಎಂದರು.

ಫೆ. 5ರಂದು ರಾಜ್ಯಕ್ಕೆ ಕೇಂದ್ರದ ಸಚಿವರು ಬರಲಿದ್ದು, ಬಜೆಟ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಫೆ. 5ರಿಂದ 15ರವರೆಗೆ ಆರ್ಥಿಕ ತಜ್ಞರು, ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು, ವಿಷಯ ತಜ್ಞರು ಸೇರಿ ಜಿಲ್ಲಾ ಕೇಂದ್ರ, ಪ್ರಮುಖ ಕೇಂದ್ರಗಳಲ್ಲಿ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗುವುದು
ನಮ್ಮ ಸಂಸದರು, ರಾಜ್ಯದ ಸಚಿವರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು.

ಇದೇ ಫೆ, 12-13ರಂದು ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿಗಳು ನಡೆಯಲಿವೆ. ಉದ್ಯಮಿಗಳು, ವ್ಯಾಪಾರಿ ಪ್ರಕೋಷ್ಠ, ಕೈಗಾರಿಕಾ ಪ್ರಕೋಷ್ಠ, ಮೋರ್ಚಾಗಳಿಂದ ವಿಚಾರಗೋಷ್ಠಿ, ಸಂವಾದ, ಮಂಥನಗಳು ನಡೆಯಲಿದೆ .
ಸಾಮಾಜಿಕ ಜಾಲತಾಣದಲ್ಲೂ ಬಜೆಟ್ ಸಂಪೂರ್ಣ ಮಾಹಿತಿ ಕೊಡಲಾಗುವುದು. ಫೆ. 5ರಿಂದ 15ರ ನಡುವಿನ ಅವಧಿಯಲ್ಲಿ ಬಜೆಟ್ ಲಾಭ ಪಡೆಯುವವರ ಸಭೆಗಳನ್ನೂ ನಡೆಸಲಾಗುವುದು .
ಬಜೆಟ್ ಬಗ್ಗೆ ಲೇಖನ ಬರೆಯಲು ಅವಕಾಶವಿದೆ.

ಪ್ರಧಾನಿಯವರು ಕಳೆದ ವರ್ಷದಲ್ಲಿ ಆತ್ಮನಿರ್ಭರತಾ ಪ್ಯಾಕೇಜ್ ಮೂಲಕ “ಜೀವ ಇದ್ದರೆ ಜೀವನ” ಎಂಬ ದೃಷ್ಟಿಕೋನದೊಂದಿಗೆ ಕಾರ್ಯ ನಿರ್ವಹಿಸಿದ್ದರು. 80 ಕೋಟಿಗೂ ಹೆಚ್ಚು ಜನರಿಗೆ ಪಡಿತರ ವಿತರಣೆ, 160 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಯಿತು. ಅಮೆರಿಕದಲ್ಲಿ ಅದು 50 ಕೋಟಿಯನ್ನೂ ದಾಟಿಲ್ಲ ಭಾರತದಲ್ಲಿ ಲಸಿಕೆ ದಾಖಲೆ ಡಿಜಿಟಲೀಕರಣ ಆಗಿದೆ. ಲಸಿಕೆಯ ಕಾರಣ ಮೂರನೇ ಅಲೆ ಭಯಾನಕ ಆಗಲಿಲ್ಲ ಎಂದರು.

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಾಗಿ ಭಾರತ ಹೊರಹೊಮ್ಮಿದೆ. ಕಚ್ಚಾ ತೈಲ ದರ ತೀವ್ರ ಹೆಚ್ಚಳ, ಸರಕು ಸಾಮಗ್ರಿ ದರ ಹೆಚ್ಚಳ ಮತ್ತಿತರ ಕಾರಣದಿಂದ ಹಣದುಬ್ಬರವು ನಿಗದಿತ ಸ್ಥಿತಿಯಿಂದ ಮೀರಿಲ್ಲ.
ಇ ವೇ ಬಿಲ್ ಹೆಚ್ಚಳ, ಟೋಲ್ ಸಂಗ್ರಹ ಹೆಚ್ಚಳ, ಹೆಚ್ಚುತ್ತಿರುವ ಜಿಎಸ್‍ಟಿ ಸಂಗ್ರಹ ಅಂಕಿಅಂಶಗಳನ್ನು ಗಮನಿಸಿದರೆ ನಮ್ಮ ಆರ್ಥಿಕ ಪ್ರಗತಿ ಗೊತ್ತಾಗುತ್ತದೆ. ಇದು ನಮ್ಮ ದೇಶದ ಆರ್ಥಿಕ ಪುನಃಶ್ಚೇತನವಾಗಿದೆ ಎಂದು ಹೇಳಿದರು.

ರಾಜ್ಯಗಳ ಹಣಕಾಸು ಪರಿಸ್ಥಿತಿಯೂ ಉತ್ತಮವಾಗಿದೆ. ನಿರುದ್ಯೋಗ ಪ್ರಮಾಣವೂ 8ರಿಂದ 9 ಶೇಕಡಾದಷ್ಟಿದೆ. ಸಾಂಕ್ರಾಮಿಕದ ಪೂರ್ವ ಸ್ಥಿತಿಗೆ ಅದು ಮರಳಿದೆ. ಇದು ಆರ್ಥಿಕ ಪುನಃಶ್ಚೇತನದ ಸಂಕೇತ .
ಸ್ಟಾಕ್ ಮಾರ್ಕೆಟ್‍ನಲ್ಲಿ ಶೇ 22ರಷ್ಟು ಹೆಚ್ಚು ಹೂಡಿಕೆ ಇದೆ. ಐಪಿಒಗಳ ಹೂಡಿಕೆಯೂ ಹೆಚ್ಚಾಗಿದೆ. ಭಾರತದ ಅಭಿವೃದ್ಧಿ ವಿಷಯದಲ್ಲೂ ಜನರು ನಂಬಿಕೆ ಹೊಂದಿರುವುದರ ಸಂಕೇತ ಇದಾಗಿದೆ. 13ರಿಂದ 16 ತಿಂಗಳುಗಳಿಗೆ ಬೇಕಾದ ಫಾರಿನ್ ಎಕ್ಸ್‍ಚೇಂಜ್ ರಿಸರ್ವ್ ನಮ್ಮಲ್ಲಿದೆ. ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ನಮ್ಮದಾಗಿದೆ .

ಆರ್ಥಿಕತೆ ತ್ವರಿತ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದ್ದು, 100 ಲಕ್ಷ ಕೋಟಿಯನ್ನು ಗತಿಶಕ್ತಿ ಯೋಜನೆಯಡಿ ವಿನಿಯೋಗಿಸಲಾಗುತ್ತದೆ. 10 ಟ್ರಿಲಿಯನ್ ಡಾಲರ್ ಇಕಾನಮಿ ಆಗಿ ಹೊರಹೊಮ್ಮಲು ಇದು ಪೂರಕ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!