ಜೂನ್‌ 3 ರಂದು ತೆರೆಗೆ ಬರಲಿದೆ ʼಪೃಥ್ವಿರಾಜ್‌ʼ

ಅಕ್ಷಯ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ʼಪೃಥ್ವಿರಾಜ್‌ʼ ಚಿತ್ರವು ಜೂನ್‌ 3 ರಂದು ತೆರೆಮೇಲೆ ಕಾಣಿಸಿಕೊಳ್ಳಲಿದೆ. ಚಿತ್ರದೆ ಟ್ರೇಲರ್‌ ಇಂದು ಬೆಳಿಗ್ಗೆ ಬಿಡುಗಡೆಯಾಗಿದ್ದು ಈಗಾಗಲೇ ಸಾವಿರಾರು ಮಂದಿ ಯೂಟ್ಯೂಬ್‌ ನಲ್ಲಿ ವೀಕ್ಷಿಸಿದ್ದಾರೆ.

ಈ ಚಿತ್ರವು ದಾಳಿಕೋರ ಮಹಮುದ್‌ ಘೋರಿಯನ್ನು 16 ಬಾರಿ ಸೋಲಿಸಿ ಕ್ಷಮೆ ನೀಡಿ ಕಳುಹಿಸಿ ಕೊನೆಗೆ ಅವನಿಂದಲೇ ಮೋಸಕ್ಕೊಳಗಾಗಿ ಸೋತು ಸಾವನ್ನಪ್ಪಿದ ರಜಪೂತ ವೀರ, ಮಹಾರಾಜ ಪೃಥ್ವಿರಾಜ್‌ ಚೌಹಾಣನಿಗೆ ಸಂಬಂಧಿಸಿದ ಕಥೆಯಾಗಿದ್ದು ಮುಖ್ಯಪಾತ್ರದಲ್ಲಿ ಖಿಲಾಡಿ ʼಅಕ್ಷಯ್‌ ಕುಮಾರ್‌ʼ ಮಿಂಚಿದ್ದಾರೆ. ಪಥ್ವಿರಾಜ ರಾಸೋದಿಂದ ಪ್ರೇರಿತವಾಗಿ ಈ ಕಥೆಯನ್ನು ಹೆಣೆಯಲಾಗಿದೆ ಎನ್ನಲಾಗಿದ್ದು ಚಿತ್ರದ ಮೇಕಿಂಗ್‌ ಉತ್ತಮವಾಗಿರುವುದನ್ನು ಟ್ರೇಲರ್‌ ಬಹಿರಂಗಪಡಿಸಿದೆ.

ಇನ್ನು ಹಲವು ಪ್ರಸಿದ್ಧ ತಾರಾಗಣವನ್ನು ಚಿತ್ರ ಹೊಂದಿದ್ದು ಚೌಹಾಣನ ಅಂಧದೊಡ್ಡಪ್ಪನಾಗಿ ಸಂಜಯ್‌ ದತ್‌, ಚಾಂದ್‌ ಬರ್ದಾಯಿಯಾಗಿ ಸೋನು ಸೂದ್‌ ಕಾಣಿಸಿಕೊಂಡಿದ್ದಾರೆ. ಘೋರಿಯಾಗಿ ಮಾನವ್‌ ವಿಜ ಕಾಣಿಸಿಕೊಂಡಿದ್ದು ಸಾಕ್ಷಿ ತನ್ವಾರ್‌, ಅಶುತೋಷ್‌, ಲಲಿತ್‌ ತಿವಾರಿ ತಾರಾಬಳಗದಲ್ಲಿದ್ದಾರೆ. ಯಶ್ ರಾಜ್‌ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ಚಿತ್ರವು ನಿರ್ಮಾಣವಾಗಿದ್ದು ಜೂನ್‌ 3 ರಂದು ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!