ಮೂರೇ ದಿನಕ್ಕೆ ಮುಗಿದ ಫ್ಲೋಟಿಂಗ್‌ ಬ್ರಿಡ್ಜ್‌ ಆಯಸ್ಸು, ಅಲೆಗಳ ಅಬ್ಬರಕ್ಕೆ ಸೇತುವೆ ನಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಮೂರು ದಿನಗಳ ಹಿಂದೆ ಮಲ್ಪೆ ಬೀಚ್‌ನಲ್ಲಿ ಉದ್ಘಾಟನೆಗೊಂಡಿದ್ದ ತೇಲುವ ಸೇತುವೆ ಅಲೆಗಳ ಅಬ್ಬರಕ್ಕೆ ಕುಸಿದು ಬಿದ್ದಿದೆ. ಮೇ 8ರ ಭಾನುವಾರ ಮಧ್ಯಾಹ್ನದಿಂದ ಸಮುದ್ರದ ಪ್ರಕ್ಷುಬ್ಧತೆ ಮತ್ತು ಎತ್ತರದ ಅಲೆಗಳಿಂದ ಸೇತುವೆಗೆ ತೀವ್ರ ಹಾನಿಯಾಗಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದಿಂದಲೇ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಸೋಮವಾರ ಬೆಳಗಾಗುವುದರಲ್ಲಿ ಸೇತುವೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಸೇತುವೆಯ ಬಿಡಿ ಭಾಗಗಳು ನೀರಿನಲ್ಲಿ ತೇಲುತ್ತಿವೆ. ಅದೃಷ್ಟವಶಾತ್ ಜನರು ಪ್ರವೇಶಿಸುವುದನ್ನು ನಿರ್ಬಂಧಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಸೇತುವೆಯ ಒಟ್ಟು ಉದ್ದ 100 ಮೀಟರ್ ಮತ್ತು 3.5 ಮೀಟರ್ ಅಗಲವಿದೆ. ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ 15 ದಿನಗಳ ಕಾಲ ತೆರೆದಿಡಬೇಕಿತ್ತು. ಅಧಿಕಾರಿಗಳ ಮಾಹಿತಿಯಂತೆ ಯೋಜನೆಗೆ ಸುಮಾರು 75-80 ಲಕ್ಷ ರೂ ವೆಚ್ಚ ತಗುಲಿದೆ.

ಇನ್ನೂ ಈ ವಿಚಾರವನ್ನು ತಳ್ಳಿಹಾಕಿರುವ ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ, ಅಲೆಗಳಿಂದ ಸೇತುವೆಗೆ ಉಂಟಾಗುವ ಹಾನಿ ತಪಪ ಬೀಗಗಳನ್ನು ಹಾನಿ ತಪ್ಪಿಸಲು ಸಂಪರ್ಕ ಕಡಿತಗೊಳಿಸಲಾಗಿದೆ ಎಂದರು. ಅಸಾನಿ ಸೈಕ್ಲೋನ್ ಎಫೆಕ್ಟ್ ಮತ್ತು ಭಾರೀ ಗಾಳಿಯಿಂದಾಗಿ ತೇಲುವ ಸೇತುವೆಗೆ ಯಾವುದೇ ಹಾನಿಯಾಗದಂತೆ ನಾವು ಸೇತುವೆಯ ಬೀಗಗಳ ಸಂಪರ್ಕ ಕಡಿತಗೊಳಿಸಿದ್ದೇವೆ. ಇದರಿಂದಾಗಿ ಇಂದು ಬೆಳಗ್ಗೆ ಸೇತುವೆಯ ಕೆಲವು ಬ್ಲಾಕ್‌ಗಳು ಸಮುದ್ರದಲ್ಲಿ ತೇಲುತ್ತಿವೆ. ಆದರೆ ಈ ಬಗ್ಗೆ ವದಂತಿ ಹರಿದಾಡುತ್ತಿವೆ ಇದ್ಯಾವುದೂ ಸತ್ಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!