ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ, ಪೋಸ್ಟರ್ ಎಲ್ಲೆಡೆ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

’ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ, ಒಂದೂವರೆ ತಿಂಗಳಿನಿಂದ ಕಾಣಿಸುತ್ತಿಲ್ಲ’ ಹೌದು, ಚಿತ್ತಾಪುರದ ಬೀದಿಬೀದಿಯಲ್ಲಿಯೂ ಈ ಪೋಸ್ಟರ್ ಕಾಣಸಿಗುತ್ತದೆ. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪೋಸ್ಟರ್ ಅಂಟಿಸಿ ಮುಷ್ಕರ ನಡೆಸುತ್ತಿದ್ದಾರೆ.

ಚಿತ್ತಾಪುರದ ಶಾಸಕರನ್ನು ನೋಡಿ ತುಂಬಾ ಸಮಯ ಆಗಿದೆ. ಹಾಗಾಗಿ ಪೋಸ್ಟರ್ ಅಂಟಿಸಿ ಹುಡುಕುತ್ತಿದ್ದೇವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಈ ವ್ಯಕ್ತಿಯನ್ನು ಚಿತ್ತಾಪುರ ಕ್ಷೇತ್ರದಲ್ಲಿ ಯಾರಾದರೂ ನೋಡಿದ್ದೀರಾ? ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಕೊನೆ ಬಾರಿ ಕ್ಷೇತ್ರದಲ್ಲಿ ಕಾಣಿಸಿದ್ದು 18 ಸೆಪ್ಟೆಂಬರ್ ಎಂದು ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!