ಮೂರು ವರ್ಷದ ನಂತರ ಭಾರತಕ್ಕೆ ಬರ‍್ತಿದ್ದಾರೆ ಪ್ರಿಯಾಂಕಾ ಚೋಪ್ರಾ, ಹೊಸ ಸಿನಿಮಾ ಮಾಡ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂರು ವರ್ಷಗಳ ನಂತರ ಇದೀಗ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬರುತ್ತಿದ್ದಾರೆ. ಈ ಬಾರಿ ಮಗಳು ಮಾಲ್ತಿ ಜೊತೆ ಮುಂಬೈಗೆ ಪ್ರಿಯಾಂಕಾ ಆಗಮಿಸುತ್ತಿದ್ದಾರೆ.

ನಿಕ್ ಜೋನಸ್ ಅವರನ್ನು ಮದುವೆಯಾದ ನಂತರ ಪ್ರಿಯಾಂಕ ಅಮೆರಿಕದಲ್ಲಿ ಸೆಟಲ್ ಆಗಿದ್ದರು. ಅಲ್ಲಿಯೇ ಉದ್ಯಮ ಕೂಡ ಆರಂಭಿಸಿದ್ದರು. ಇದೀಗ ನಾನು ಮುಂಬೈಗೆ ಬರುತ್ತಿದ್ದೇನೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

ಪ್ರಿಯಾಂಕಾ ಮತ್ತೆ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ ಎನ್ನುವ ಗುಸುಗುಸು ಆರಂಭವಾಗಿದೆ, ಅದಕ್ಕಾಗಿಯೇ ಮುಂಬೈ ಬಂದಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಫರಾನ್ ಅಕ್ತರ್ ನಿರ್ದೇಶನದ ಜೀ ಲೇ ಝರಾ ಸಿನಿಮಾದಲ್ಲಿ ಪ್ರಿಯಾಂಕ ಕೂಡ ನಟಿಸುತ್ತಾ ಇದ್ದು, ಸಿನಿಮಾ ಶೂಟಿಂಗ್‌ಗಾಗಿ ಬಂದಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!