ದೇಶಕ್ಕಾಗಿ ತಾಯಿ ಮಾಂಗಲ್ಯವನ್ನೇ ಅರ್ಪಿಸಿದ್ದಾರೆ,ತಂದೆ ಜೀವವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
ನನ್ನ ತಾಯಿ ದೇಶಕ್ಕಾಗಿ ತನ್ನ ಮಾಂಗಲ್ಯವನ್ನೇ ಅರ್ಪಿಸಿದ್ದಾರೆ. ನನ್ನ ತಂದೆ ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಇಂತಹ ಪಕ್ಷ ಮಹಿಳೆಯರ ಮಾಂಗಲ್ಯವನ್ನು ಕಸಿಯುತ್ತಾ ಎಂದು ಕಾಂಗ್ರೆಸ್ ಪಕ್ಷ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತದೆ. ಭೂಮಿ, ಒಡವೆ, ವಸ್ತು, ಹೆಣ್ಣುಮಕ್ಕಳ ಮಂಗಳಸೂತ್ರವನ್ನು ಕೂಡ ಮುಸ್ಲಿಮರಿಗೆ ಕೊಡಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಪ್ರಚಾರ ನಡೆಸಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಯುದ್ಧದ ಸಂದರ್ಭದಲ್ಲಿ ನನ್ನ ಅಜ್ಜಿ ಚಿನ್ನಾಭರಣ ಒತ್ತೆ ಇಟ್ಟು ನೆರವಾಗಿದ್ದರು. ನನ್ನ ಅಜ್ಜಿ ಇಂದಿರಾ ಗಾಂಧಿ ಮನೆಯಲ್ಲಿದ್ದ ಚಿನ್ನವನ್ನು ಒತ್ತೆ ಇಟ್ಟಿದ್ದರು. ಇಂತಹ ಪಕ್ಷದ ನಾಯಕರು ದೇಶದ ಸಂಪತ್ತು ಲೂಟಿ ಮಾಡುತ್ತಾರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಭಾರತದ ಯಾವ ಮೂಲೆಯಲ್ಲಿಯೂ ಮೋದಿ ಅಲೆ ಇಲ್ಲ. 10 ವರ್ಷವಾದರೂ ದೇಶಕ್ಕೆ ಅಚ್ಛೇ ದಿನ್ ಬರಲೇ ಇಲ್ಲ. ದೇಶದ ಜನರ ಮುಂದೆ ಇರುವುದು ಬೆಲೆ ಏರಿಕೆ, ನಿರುದ್ಯೋಗ. ಬಹುದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ ಮತ್ತು ಬೆಲೆ ಏರಿಕೆ. ಬೆಲೆ ಏರಿಕೆ ಆದಾಗ ಮಹಿಳೆಯರು, ಜನರು ಸಂಕಷ್ಟದಲ್ಲಿದ್ದಾರೆ. ಮನೆ ನಡೆಸುವವರ ಕಷ್ಟ ಏನೆಂದು ಅಕ್ಕತಂಗಿಯರಿಗೆ ಗೊತ್ತು. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ದರ ಹೆಚ್ಚಾಗಿದೆ. ನಮ್ಮ ಅಕ್ಕತಂಗಿಯರ ಕಷ್ಟ ನನಗೆ ಅರ್ಥವಾಗುತ್ತದೆ. ಸಣ್ಣಪುಟ್ಟ ಉದ್ಯಮಿಗಳಿಗೂ ಕೇಂದ್ರ ಸಹಾಯ ಮಾಡುತ್ತಿಲ್ಲ. ರೈತರಿಗೆಮ ಮಧ್ಯಮ ವರ್ಗಕ್ಕೆ ನೆರವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಂತೋಷವಾಗಿದೆ. ನುಡಿದಂತೆ ನಡೆದಿದೆ ಎಂದರೆ ಅದು ಕಾಂಗ್ರೆಸ್ ಪಕ್ಷ. ಈ ಚುನಾವಣೆ ದೇಶದ ಮುಂದಿನ ಪೀಳಿಗೆಯ ಚುನಾವಣೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!