ರುತುರಾಜ್‌ ಗಾಯಕ್ವಾಡ್‌ ಭರ್ಜರಿ ಶತಕ: ಲಕ್ನೋ ಗೆಲುವಿಗೆ 211 ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರುತುರಾಜ್‌ ಗಾಯಕ್ವಾಡ್‌ ಭರ್ಜರಿ ಶತಕದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 3 ವಿಕೆಟ್‌ ನಷ್ಟಕ್ಕೆ 210 ರನ್‌ ಕಲೆಹಾಕಿದೆ.

ರುತುರಾಜ್‌ ಗಾಯಕ್ವಾಡ್‌ಗೆ ಭರ್ಜರಿ ಸಾಥ್‌ ನೀಡಿ ಶಿವಂ ದುಬೇ ಕೇವಲ 27 ಎಸೆತಗಳಲ್ಲಿ 66 ರನ್‌ ಪೇರಿಸಿದ್ದರಿಂದ ತಂಡ 200 ರನ್‌ ಗಡಿ ದಾಟಲು ಸಾಧ್ಯವಾಯಿತು. ಕೇವಲ 46 ಎಸೆತಗಳಲ್ಲಿ ಈ ಜೋಡಿ 100 ರನ್‌ಗಳ ಜೊತೆಯಾಟವಾಡಿತು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಮೊದಲ ಓವರ್‌ನಲ್ಲಿಯೇ ನಿರ್ಗಮಿಸಿದರು. ಆ ಬಳಿಕ ರುತುರಾಜ್‌ಗೆ ಜೊತೆಯಾದ ಡೇರಿಲ್‌ ಮಿಚೆಲ್‌ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು.

49 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ರುತುರಾಜ್‌ಗೆ ಜೊತೆಯಾದ ಅನುಭವಿ ಆಟಗಾರ ರವೀಂದ್ರ ಜಡೇಜಾ ತಂಡದ ಮೊತ್ತವನ್ನು 100ರ ಗಡಿ ದಾಟಿಸುವ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ16 ರನ್‌ ಗಳಿಸಿದರು.

ಬಳಿಕ ರುತುರಾಜ್‌ ಹಾಗೂ ಶಿವಂ ದುಬೆ ಜೋಡಿ ಆಟ ಮುಂದುವರಿಸಿದರು. 27 ಎಸೆತ ಎದುರಿಸಿದ ಶಿವಂ ದುಬೆ 7 ಸಿಕ್ಸರ್‌ ಹಾಗೂ 3 ಬೌಂಡರಿ ಮೂಲಕ 66 ರನ್‌ ಚಚ್ಚಿದರು. ರುತುರಾಜ್‌ ಬಾರಿಸಿದ ಅಜೇಯ 108 ರನ್‌ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!