August 31, 2026
Monday, August 31, 2026
spot_img

ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿಯಾಗುತ್ತಾಳೆ: ಕಾಮಾಕ್ಯ ಸನ್ನಿಧಿಯಲ್ಲಿ ಬಾಬಾ ನುಡಿದ ಭವಿಷ್ಯ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂಗೆ ಭೇಟಿ ನೀಡಿದ್ದು, ಈ ವೇಳೆ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದ ಅವರಿಗೆ ಅಲ್ಲಿನ ಬಾಬಾ (ತಪಸ್ವಿ) ಮಾಡಿದ್ದ ಆಶೀರ್ವಾದ ಇದೀಗ ಹೆಚ್ಚು ಗಮನ ಸೆಳೆದಿದೆ. ಇದರ ವಿಡಿಯೊ ವೈರಲ್ ಆಗಿದೆ.

ಪ್ರಿಯಾಂಕಾ ಗಾಂಧಿ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಅಘೋರಿ ಬಾಬಾ ಎಂದೇ ಕರೆಯಲ್ಡುವ ನಾಗಾ ಸಾಧುವಿನೊಂದಿಗೆಸ್ವಲ್ಪ ಸಮಯ ಸಂವಾದ ನಡೆಸಿದರು.

ಈ ವೇಳೆ ಬಾಬಾ ಅವರು ಪ್ರಿಯಾಂಕಾ ವಾದ್ರಾ ಅವರ ತಲೆಯ ಮೇಲೆ ಕೈ ಇಟ್ಟು ನಮ್ಮ ಮಗಳು ಪ್ರಧಾನಿಯಾಗುತ್ತಾಳೆ ಎಂದು ಹೇಳಿದ್ದಾರೆ. ಇದೀಗ ಈ ಮಾತು ವೈರಲ್ ಆಗಿದೆ .

ಇತ್ತ ಬಾಬಾ ಅವರ ಮಾತಿಗೆ ಪ್ರಿಯಾಂಕಾ ಗಾಂಧಿ ಮುಗುಳ್ನಕ್ಕು ಅಲ್ಲಿಂದ ಹೊರಟು ಹೋದರು. ದೇವಾಲಯ ಭೇಟಿಯ ನಂತರ, ವಯನಾಡು ಸಂಸದೆ ಗುವಾಹಟಿಯ ರಾಜೀವ್ ಭವನಕ್ಕೆ (ಕಾಂಗ್ರೆಸ್ ಭವನ) ತೆರಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !