ದಬಾಂಗ್​ ಡೆಲ್ಲಿ ಮುಡಿಗೆ ಪ್ರೊ ಕಬಡ್ಡಿ ಚಾಂಪಿಯನ್​ ಪಟ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ದಬಾಂಗ್​ ಡೆಲ್ಲಿ ಉತ್ತಮ ಆಟವಾಡುವ ಮೂಲಕ​ ಚಾಂಪಿಯನ್​ ಆಗಿ ಹೊರಹೊಮ್ಮಿದೆ.
ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ಗ್ರ್ಯಾಂಡ್​ ಶೆರಟಾನ್​ ಹೋಟೆಲ್​​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್​​ ವಿರುದ್ಧ ಡೆಲ್ಲಿ ದಬಾಂಗ್​​ 37-36 ಅಂಕಗಳಿಂದ ಗೆಲುವು ದಾಖಲು ಮಾಡಿದೆ.ಈ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ.
ಸೆಮೀಸ್​ನಲ್ಲಿ ಯುಪಿ ಯೋಧಾ ವಿರುದ್ಧ ಗೆಲುವು ಸಾಧಿಸಿ ಪಾಟ್ನಾ ಫೈನಲ್​ಗೆ ಪ್ರವೇಶ ಪಡೆದುಕೊಂಡಿತ್ತು. ಮತ್ತೊಂದೆಡೆ ಬೆಂಗಳೂರು ಬುಲ್ಸ್​ ವಿರುದ್ಧ ಗೆದ್ದ ದಬಾಂಗ್​ ಡೆಲ್ಲಿ ಫೈನಲ್​ಗೆ ಎಂಟ್ರಿ ನೀಡಿತ್ತು. ಇಂದು ನಡೆದ ಫೈನಲ್ ನಲ್ಲಿ ದಬಾಂಗ್​ ಡೆಲ್ಲಿ ರೋಚಕ ಗೆಲುವು ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!