ದಿನಭವಿಷ್ಯ: ಎಲ್ಲರ ಮೇಲೆ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ!

ಶನಿವಾರ, 26 ಫೆಬ್ರವರಿ  2022, ಮಂಗಳೂರು

ಮೇಷ
ಎಲ್ಲರ ಮೇಲೆ ಅಧಿಕಾರ ಚಲಾಯಿಸುವುದು ನಿಮ್ಮ ಉದ್ದೇಶ. ಆದರೆ ಇದರಿಂದ ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ವಿನಯ ಜತೆಗಿರಲಿ.

ವೃಷಭ
ಸ್ನೇಹಿತರು ಮತ್ತು ಕುಟುಂಬಸ್ಥರ ಕುರಿತು ಮೃದು ಧೋರಣೆ ತಳೆಯುವಿರಿ. ಅವರ ನೆರವಿಗೆ ಮುಂದಾಗುವಿರಿ. ಆರ್ಥಿಕ ಒತ್ತಡ ಕಾಡಬಹುದು.

ಮಿಥುನ
ವೃತ್ತಿಯಲ್ಲಿ ಒತ್ತಡ. ಸುಗಮ ಕಾರ್ಯಕ್ಕೆ ಅಡ್ಡಿಗಳು. ಕೆಲವರ ಅಸಹಕಾರ ನಿಮ್ಮ ಅಸಹನೆ ಹೆಚ್ಚಿಸಬಹುದು. ಆರ್ಥಿಕ ಕೊರತೆ.

ಕಟಕ
ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಕಂಡೀತು. ಆದರೆ ಅದು ಗಂಭೀರವೇನೂ ಅಲ್ಲ. ಖರೀದಿಯ ಉತ್ಸಾಹವಿದ್ದರೂ ಹಣದ ಕೊರತೆ ಕಾಡುವುದು.

ಸಿಂಹ
ನಿಮಗಿಂದು ಶುಭದಿನ. ಕಾರ್ಯಸಾಫಲ್ಯ. ಬಯಸಿದ ಉದ್ದೇಶ ಈಡೇರುವುದು. ಸ್ವಂತ ಉದ್ದಿಮೆ ಹೊಂದಿರುವವರಿಗೆ ಉತ್ತಮ ಪ್ರಗತಿ.

ಕನ್ಯಾ
ಭಾವನಾತ್ಮಕ ವಿಚಾರಗಳು ಇಂದು ನಿಮ್ಮನ್ನು ಕಾಡಬಹುದು. ಆರಂಭದಲ್ಲಿ ಬೇಸರ ಉಂಟಾದರೂ ಅಂತಿಮವಾಗಿ ನಿಮಗೆ ಪೂರಕವಾಗುವುದು.

ತುಲಾ
ಕೆಲವು ಅನಿರೀಕ್ಷಿತ ಬೆಳವಣಿಗೆ ಸಂಭವಿಸುವುದು. ಆದರೆ ಇದು ನಿಮಗೆ ಒಳಿತನ್ನೇ ಮಾಡಲಿದೆ. ಆತಂಕವೊಂದು ನಿವಾರಣೆ ಆಗುವುದು.

ವೃಶ್ಚಿಕ
ನೀವಿಂದು ಕ್ಲಿಷ್ಟಕರ ಸ್ಥಿತಿಗೆ ಸಿಲುಕುವಿರಿ. ಏಕಾಂಗಿತನ ಕಾಡಬಹುದು. ಆದರೂ ನಿಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಸಮರ್ಥರಾಗುವಿರಿ.

ಧನು
ಉತ್ಸಾಹ, ಸಂತೋಷದ ದಿನ. ಆಪ್ತರಲ್ಲಿ ಭಿನ್ನಮತ ಉಂಟಾದರೂ ಅದು ನಿಮ್ಮ ಉತ್ಸಾಹ ಕುಂದಿಸದು. ಅಂತಿಮ ವಾಗಿ ಎಲ್ಲರೂ ನಿಮ್ಮ ನಿಲುವು ಒಪ್ಪುವರು.

ಮಕರ
ಇಂದು ನಿಮ್ಮ ವಿಗೆ ನೀವೇ ಹೊಣೆಗಾರ. ನಿಮಗೆ ಬೇಕೆನಿಸಿದ ಪ್ರಗತಿ ಸಾಸುವಿರಿ. ನಿಮ್ಮ ಮನದಿಚ್ಛೆ ಪೂರ್ತಿಯಾಗುವುದು. ತೃಪ್ತಿಕರ ದಿನ.

ಕುಂಭ
ಇಂದಿನ ದಿನ ನಿಮ್ಮ ಭವಿಷ್ಯ ರೂಪಿಸ ಬಲ್ಲುದು. ಪ್ರಮುಖ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಿ. ಕೌಟುಂಬಿಕ ಸಂತೋಷ.

ಮೀನ
ಒತ್ತಡದ ಬದುಕಿಂದ ವಿರಾಮ ಪಡೆಯಲು ಬಯಸುವಿರಿ. ಕುಟುಂಬಸ್ಥರ ಜತೆ ಕಾಲ ಕಳೆಯಿರಿ. ಸಣ್ಣ ಪ್ರವಾಸದ ಯೋಜನೆ ಹಾಕಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!