ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೊ ಕಬಡ್ಡಿ ಲೀಗ್ ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಟೂರ್ನಿ ಆರಂಭಗೊಳ್ಳಲು ವೇಳಾಪಟ್ಟಿ ನಿಗದಿ ಮಾಡಲಾಗಿದೆ.
9ನೇ ಆವೃತ್ತಿ ಅಕ್ಟೋಬರ್ 7ರಿಂದ ಆರಂಭಗೊಳ್ಳಲಿದೆ. ಡಿಸೆಂಬರ್ ಮಧ್ಯದವರೆಗೂ ಟೂರ್ನಿ ನಡೆಯಲಿದೆ.
ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ನಲ್ಲಿ ಲೀಗ್ ಹಂತದ ಎಲ್ಲ ಪಂದ್ಯಗಳು ನಡೆಯಲಿವೆ. ಈ ಸಲದ ಆವೃತ್ತಿಯಲ್ಲಿ ಪಂದ್ಯಗಳ ವೀಕ್ಷಣೆ ಮಾಡಲು ಪ್ರೇಕ್ಷಕರಿಗೆ ಅನುಮತಿಸಲಾಗಿದೆ.
🚨 Mark your calendars 🚨#vivoProKabaddi Season 9️⃣ is here and we can't wait to welcome you back ❤️ pic.twitter.com/iDMMapz5uR
— ProKabaddi (@ProKabaddi) August 26, 2022
ಲೀಗ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಪಮ್ ಗೋಸ್ವಾಮಿ ಮಾತನಾಡಿ, ಪ್ರೊ ಕಬಡ್ಡಿ ಲೀಗ್ ಆಯೋಜನೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಕಳೆದ ವರ್ಷದ ಟೂರ್ನಮೆಂಟ್ ಬಯೋ ಬಬಲ್ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಸಲ ಅಭಿಮಾನಿಗಳಿಗೆ ಅವಕಾಶ ನೀಡಲಾಗುವುದು. ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಿರುವ ಕಾರಣ ಪ್ರೇಕ್ಷಕರು ಆಟ ಕಣ್ತುಂಬಿಕೊಳ್ಳಬಹುದು ಎಂದರು.