ಭಾರತ್​ ಜೋಡೋ ಯಾತ್ರೆಯಲ್ಲಿ ಪಾಕ್ ಪರ ಘೋಷಣೆ: ಬಿಜೆಪಿಯಿಂದ ವಿಡಿಯೋ ಬಹಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶದ ಖಾರ್ಗೋನ್‌ ಗೆ ಲಗ್ಗೆ ಇಟ್ಟ ಭಾರತ್​ ಜೋಡೋ ಯಾತ್ರೆಯ ಸಂದರ್ಭ ಪಾಕ್​ ಪರ ಘೋಷಣೆಗಳು ಕೇಳಿಬಂದಿವೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.

ಈ ಕುರಿತು ವಿಡಿಯೋ ಪೋಸ್ಟ್ ಮಾಡಿದ ಅಮಿತ್ , ವಿಡಿಯೋದ ಅಂತ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವುದನ್ನು ಗಮನಿಸಿ ಎಂದು ಬರೆದುಕೊಂಡಿದ್ದಾರೆ.

ಆದರೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪವನ್ನು ತಳ್ಳಿ ಹಾಕಿದೆ. ಇದು ಫೇಕ್ ವಿಡಿಯೋ, ಭಾರತ್ ಜೋಡೋ ಯಾತ್ರೆಯಿಂದ ಬೆಚ್ಚಿ ಬಿದ್ದಿರುವ ಬಿಜೆಪಿ ಈ ರೀತಿ ಆರೋಪ ಮಾಡುತ್ತಿದೆ ಎಂದಿದೆ.

ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆಗೆ ಸೇರಲು ರಿಚಾ ಚಡ್ಡಾ ಮನವಿ ಮಾಡಿದ ಕೂಡಲೇ ಖಾರ್ಗೋನ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಕೇಳಿಬಂದಿವೆ. ಈ ವಿಡಿಯೋವನ್ನು ಮಧ್ಯಪ್ರದೇಶದ ಕಾಂಗ್ರೆಸ್ ಪೋಸ್ಟ್ ಮಾಡಿತ್ತು. ವಿಷಯ ಬೆಳಕಿಗೆ ಬರುತ್ತಿದ್ದಂತೆ ಅದನ್ನು ಅಳಿಸಿದೆ. ಇದು ಕಾಂಗ್ರೆಸ್‌ನ ನಿಜವಾದ ಮುಖ’ ಎಂದು ಅಮಿತ್​ ಮಾಳವೀಯ ತಮ್ಮ ಟ್ವೀಟ್​ನಲ್ಲಿ ಬರೆದಿದ್ದಾರೆ.

ಆದರೆ, ಜೈರಾಮ್ ರಮೇಶ್, ‘ಇದು ಭಾರತ್ ಜೋಡೋ ಯಾತ್ರೆಗೆ ಕಳಂಕ ತರಲು ಬಿಜೆಪಿಯ ಡರ್ಟಿ ಟ್ರಿಕ್ಸ್ ಡಿಪಾರ್ಟ್‌ಮೆಂಟ್‌ನ ಕೆಲಸ. ಯಾತ್ರೆಗೆ ಸಿಗುತ್ತಿರುವ ಅಪಾರ ಜನಬೆಂಬಲವನ್ನು ನೋಡಿ ಭಯ ಬಿದ್ದ ಬಿಜೆಪಿ ಹೀಗೆ ಮಾಡಿದೆ. ಅದರ ವಿರುದ್ಧ ನಾವು ತಕ್ಷಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಬಿಜೆಪಿಯ ಇಂತಹ ಹೇಯ ತಂತ್ರಗಳಿಗೆ ನಾವು ಬಲಿಯಾಗುವುದಿಲ್ಲ. ಅವರಿಗೆ ತಕ್ಕ ಉತ್ತರ ನೀಡಲಾಗುವುದು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಪಾಕ್​ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ‘ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆಯೇ ಅಥವಾ ದೇಶವನ್ನು ಒಡೆಯಲು ಬಯಸುವವರನ್ನು ಒಗ್ಗೂಡಿಸುತ್ತಿದೆಯೇ’ ಎಂದು ಸಿಎಂ ಚೌಹಾಣ್ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!