ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಅಳಿಯ ಬಂದರೆ ಊರಿನಲ್ಲಿ ಮೆರವಣಿಗೆ ಮಾಡುವ ಪದ್ದತಿ ಇದೆ. ಇಂದಿಗೂ ಕೆಲ ಗ್ರಾಮಗಳಲ್ಲಿ ಈ ಸಂಪ್ರದಾಯವನ್ನು ಅನುಸರಿಸುತ್ತಾರೆ. ಅಂತೆಯೇ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ವಿದಾ ಗ್ರಾಮದಲ್ಲಿ ವಿಚಿತ್ರ ಪದ್ಧತಿ ಇದೆ. ಹೋಳಿ ನಂತರ ಹೊಸ ಅಳಿಯನನ್ನು ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡೋದು ಇವರ ವಾಡಿಕೆ. ಕಳೆದ 82 ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಊರಿಗೆ ಹೊಸ ಅಳಿಯ ಬಂದರೆ ಊರಿನವರೆಲ್ಲ ಸೇರಿ ಕತ್ತೆಯ ಮೇಲೆ ಕರೆದುಕೊಂಡು ಹೋಗಿ ಸಂಪ್ರದಾಯ ಮುಂದುವರಿಸುತ್ತಾರೆ.
ಹೋಳಿ ಬಂದ ಮೇಲೆ ಊರಿಗೆ ಹೊಸದಾಗಿ ಬಂದ ಅಳಿಯಂದಿರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಊರವರ ಕಣ್ಣಿಗೆ ಕಾಣದೆ ಹೊರಟು ಹೋಗುತ್ತಾರೆ. ಗ್ರಾಮಸ್ಥರು ಅವರಲ್ಲಿ ಒಬ್ಬರನ್ನು ಗುರುತಿಸಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಈ ವೇಳೆ ಗ್ರಾಮದ ನೂತನ ಅಳಿಯ ಅವಿನಾಶ ಕರ್ಣೆ ಅವರನ್ನು ಗ್ರಾಮಸ್ಥರು ಕರೆದೊಯ್ದು ಕತ್ತೆಯ ಮೇಲೆ ಮೆರವಣಿಗೆ ಮಾಡಿದರು.
ನಂತರ ಅಳಿಯನಿಗೆ ಹೊಸ ಬಟ್ಟೆ, ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲಾಯಿತು. ಹೊಸ ಅಳಿಯನನ್ನು ಕತ್ತೆಯ ಮೇಲೆ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
बीड : विड्यात जावयाची गाढवावरून मिरवणूक; १५० वर्षांची अनोखी परंपरा pic.twitter.com/mrdKMT2XY2
— Lokmat (@lokmat) March 7, 2023