WOMEN’S DAY | ಇಂದು ನಿಮ್ಮಾಕೆಯನ್ನು ಈ ರೀತಿಯೂ ಸರ್ಪೈಸ್ ಮಾಡಬಹುದು.. ಸೂಪರ್ ಐಡಿಯಾ ಇಲ್ಲಿದೆ..

ಮಹಿಳೆಯರು ನೀವಂದುಕೊಂಡಷ್ಟು ಕಠಿಣ ಅಲ್ಲ, ಅವರನ್ನು ಅರ್ಥಮಾಡಿಕೊಳ್ಳೋದು, ಒಲಿಸೋದು ತುಂಬಾನೇ ಸುಲಭ. ಅವರನ್ನು ಅರ್ಥಮಾಡಿಕೊಳ್ಳೋಕೆ ಕಷ್ಟ, ಅವರಿಗೆ ಏನು ಕೊಟ್ರೂ ಖುಷಿಯಾಗೋದಿಲ್ಲ ಅನ್ನೋರು ಇದನ್ನು ಖಂಡಿತಾ ಓದಿ..

  • ಗಿಫ್ಟ್ ಅಂದರೆ ಕಾಸ್ಟ್ಲಿ ಐಟಂ ಅಂತಲ್ಲ, ಒಂದು ಮೊಳ ಮಲ್ಲಿಗೆ ಕೂಡ ಗಿಫ್ಟ್. ಈಗಿನ ಕಾಲದಲ್ಲೂ ಮಲ್ಲಿಗೆ ಹೂವಲ್ಲೂ ಖುಷಿಯಾಗೋ ಹೆಣ್ಣುಮಕ್ಕಳಿದ್ದಾರೆ.
  • ಅವಳು ಕೂತ ಜಾಗದಲ್ಲಿಂದ ಏಳದಂತೆ, ನೀವೇ ಒಂದು ತಿಂಡಿ ಮಾಡಿ ತಂದುಕೊಡಿ, ಇದೂ ಗಿಫ್ಟ್!
  • ಅವಳು ಮಾಡಿದ ಅಡುಗೆಗೆ ಬಯ್ಯದೆ, ಅವಳ ಮಾಡಿದ ಕೆಲಸಕ್ಕೆ ತೆಗಳದೆ, ಅವಳ ಮಾತನ್ನು ಗೌರವಿಸಿದರೆ ಅದೂ ಅವಳಿಗೆ ನೀವು ಕೊಡೋ ಗಿಫ್ಟ್.
  • ನಾನ್ ಪಾತ್ರೆ ತೊಳಿತಿನಿ, ಮುಸರೆ ಯಾಕೆ ಮುಟ್ತೀರ ಎಂದು ಆಕೆ ಹೇಳಿದಾಗ, ದಿನಾ ನೀನು ಮುಟ್ಟುವಾಗ ನಾನೇನು ಹೇಳೋದಿಲ್ಲ, ಒಂದು ದಿನ ತೊಳೆದರೆ ಏನಾಗಲ್ಲ ಅಂತ ಹೇಳಿ ತೊಳೆದುಬಿಡಿ.
  • ಅವಳು ಅಡುಗೆ ಮಾಡುವಾಗ ಮೊಬೈಲ್ ನೋಡದೇ ಆಕೆಯ ಬಳಿ ನಿಂತು ಮಾತನಾಡುತ್ತಾ ಟೈಮ್ ಪಾಸ್ ಮಾಡಿ ಇದೂ ಕೂಡ ಗಿಫ್ಟ್.
  • ಕೈಲಾದ ಗಿಫ್ಟ್ ನೀಡಿ, ಅದು ಗಾಜಿನ ಬಳೆ ಆಗಿರಬಹುದು, ಡೈಮಂಡ್ ನೆಕ್ಲೇಸ್ ಆಗಿರಬಹುದು, ನಿಮಗೆ ಆಗಿದ್ದನ್ನು ಮಾಡಿ ಇದು ಅವರಿಗೆ ಖುಷಿ ನೀಡುತ್ತದೆ.
  • ಒಂದು ದಿನ ಫ್ರೆಂಡ್ಸ್ ಜೊತೆ ಸುತ್ತಾಡು, ಮಗು ನಾನು ನೋಡ್ಕೋತಿನಿ ಅನ್ನಿ ನೋಡೋಣ..
  • ತವರು ಮನೆಗೆ ಹೋಗಿ ನಾಲ್ಕು ದಿನ ನೆಮ್ಮದಿಯಾಗಿ ಇದ್ದು ಬಾ ಎಂದು ಕಳಿಸಿಕೊಡಿ.
  • ಅವಳ ಕುಟುಂಬದ ಜೊತೆ ಟ್ರಿಪ್ ಪ್ಲಾನ್ ಮಾಡಿ ನೋಡಿ.
  • ಆಕೆ ಆಫೀಸ್‌ನಲ್ಲಿದ್ದರೆ ಒಂದು ರೋಸ್ ಬೊಕ್ಕೆ ಕಳಿಸಿನೋಡಿ ಸಾಕು ಆಕೆ ಖುಷಿಯಾಗ್ತಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!