Saturday, January 28, 2023

Latest Posts

ನಟಿ ರಮ್ಯ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಕಾನೂನು ಸಂಕಷ್ಟ: ‘ಟೈಟಲ್’ಗೆ ತಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೋಹಕ ತಾರೆ ರಮ್ಯ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ, ಈಗ ಕಾನೂನು ಸಂಕಷ್ಟ ಎದುರಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಚಿತ್ರದ ಟೈಟಲ್ ಬಳಸದಂತೆ ತಡೆ ತಂದಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, 1990ರಲ್ಲಿ ನಿರ್ದೇಶನ ಮಾಡಿದ್ದಂತ ಬಣ್ಣದ ಗೆಜ್ಜೆ ಚಿತ್ರದಲ್ಲಿ ಸ್ವಾತಿ ಮುತ್ತಿನ ಮಳೆ  ಹಾಡು ಸೂಪರ್ ಹಿಟ್ ಆಗಿತ್ತು.  ಈ ಹಾಡಿನ ಸಾಲನ್ನೇ ನಟಿ ರಮ್ಯ ಸಿನಿಮಾ ನಿರ್ಮಾಣ ಮಾಡುವುದಾಗಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ ಎಂದರು.

ನಾನು ರಮ್ಯ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಬಳಸದಂತೆ ತಡೆ ತಂದಿದ್ದೇನೆ ಎಂಬುದಾಗಿ ತಮ್ಮ ಕಾನೂನು ಸಮರದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!