ಅಮೃತಯಾತ್ರೆ: ಹತ್ತೇ ವರ್ಷದಲ್ಲಿ 3 ಪಟ್ಟು ಹೆಚ್ಚಾಗಿದೆ ದೇಶೀಯ ಪ್ರವಾಸಿಗರ ಸಂಖ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಾದ ಹೆಚ್ಚಳದ ಬಗ್ಗೆ ಈಗಾಗಲೇ ಓದಿದ್ದೀರಿ. ಇಂದು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಾದ ಪ್ರವಾಸಿಗರ ಬಗ್ಗೆ ತಿಳಿದುಕೊಳ್ಳೋಣ. ದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದಂತೆಲ್ಲ ವೀದೇಶಿ ಪ್ರವಾಸಿಗರೊಂದೇ ಅಲ್ಲದೇ ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವ ಸಮಯದಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಾದ ಹೆಚ್ಚಳದ ಕಥೆ ಸ್ವಾರಸ್ಯಕರವಾಗಿದೆ.

ಈ ದೇಶೀಯ ಪ್ರವಾಸಿಗರ ಸಂಖ್ಯೆಲ್ಲಿನ ಹೆಚ್ಚಳವು ದೇಶದ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಯಲ್ಲಾದ ಪ್ರಗತಿಯನ್ನು ಒತ್ತಿ ಹೇಳುತ್ತದೆ. ಅಲ್ಲದೇ ದೇಶೀಯ ಸಾರಿಗೆ-ಸಂಪರ್ಕ ವ್ಯವಸ್ಥೆಯಲ್ಲಿನ ಸುಧಾರಣೆಯನ್ನೂ ಬಿಂಬಿಸುತ್ತದೆ. ರಸ್ತೆಗಳ ಅಭಿವೃದ್ಧಿಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ ದೇಶೀಯ ಪ್ರವಾಸಿಗರ ಸಂಖ್ಯೆಯ ಹೆಚ್ಚಳವೂ ಪರಿಗಣಿಸಬೇಕಾದ ಅಂಶ. ಏಕೆಂದರೆ ಸಾರಿಗೆ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲವೆಂದರೆ ಈ ಸಂಖ್ಯೆ ಏರುಮುಖವಾಗಲಾರದು. ಆದರೆ ಭಾರತದ ದೇಶೀಯ ಪ್ರವಾಸಿಗರ ಸಂಖ್ಯೆಯ ಹೆಚ್ಚಳವು ಭಾರತವು ಸಾಧಿಸಿದ ಪ್ರಗತಿಯ ಸೂಚಕ. ಸರಿಯಾದ ಸಂಪರ್ಕ- ಅತ್ಯುನ್ನತ ದರ್ಜೆಗಳನ್ನೊದಗಿಸಿದರ ಪರಿಣಾಮ ಇಂದು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

1991 ರ ಸಮಯದಲ್ಲಿ 6.67 ಕೋಟಿ ಯಷ್ಟು ದೇಶೀಯ ಪ್ರವಾಸಿಗರ ಸಂಖ್ಯೆಯಿತ್ತು. ನಂತರದಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿತು. 2019ರ ಹೊತ್ತಿಗೆ 232.19 ಕೋಟಿಯಷ್ಟು ಪ್ರವಾಸಿಗರು ಬೇರೆ ಬೇರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೇಟಿನೀಡಿದ್ದಾರೆ. ಕಳೆದೊಂದು ದಶಕದಲ್ಲಿಯೇ ಈ ಸಂಖ್ಯೆ 3 ಪಟ್ಟು ಏರಿಕೆಯಾಗಿದೆ. ತಾಜ್‌ ಮಹಲ್‌ ದೇಶೀಯ ಪ್ರವಾಸಿಗರ ನೆಚ್ಚಿನ ಪ್ರವಾಸಿ ಕೇಂದ್ರವಾಗಿದ್ದು ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೆಂಪುಕೋಟೆ ಮತ್ತು ಕುತುಬ್‌ ಮಿನಾರ್‌ ನಂತರದ ಸ್ಥಾನದಲ್ಲಿವೆ. ಉತ್ತರ ಪ್ರದೇಶ ಪ್ರವಾಸಿಗರ ಅತ್ಯಂತ ನೆಚ್ಚಿನ ರಾಜ್ಯವಾಗಿ ಹೊರಹೊಮ್ಮಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!