CINE| VD12 ಸಿನಿಮಾಗೆ 100 ಕೋಟಿಗೂ ಹೆಚ್ಚು ಬಜೆಟ್: ಇಷ್ಟೊಂದು ಹಣ ಹೀರೋ ನೋಡಿ ಇಟ್ಟಿಲ್ವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಜಯ್ ದೇವರಕೊಂಡ ಖುಷಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಅಷ್ಟು ಹಿಟ್‌ ಅಲ್ಲದಿದ್ರೂ ಜನರ ಮನಗೆದ್ದಿದೆ. ನಂತರ ಇದೀಗ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಅವರ 12 ನೇ ಚಿತ್ರ ಮತ್ತು ಗೀತ ಗೋವಿಂದಂನಂತಹ ಹಿಟ್ ಚಿತ್ರ ನೀಡಿದ ಪರುಶುರಾಮ್ ಅವರ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಅವರ 13 ನೇ ಚಿತ್ರ ಬರಲಿದೆ.

ಸಿತಾರಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ಗೌತಮ್ ತಿನ್ನಾನೂರಿ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಅವರ 12 ನೇ ಚಿತ್ರ ಭಾರಿ ನಿರೀಕ್ಷೆಗಳನ್ನು ಹೊಂದಿದೆ. ವಿಡಿ12 ಸ್ಪೈ ಥ್ರಿಲ್ಲರ್ ಎಂದು ಹೇಳಲಾಗುತ್ತದೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ವೈರಲ್ ಆಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಶೂಟಿಂಗ್ ಕೂಡ ಶುರುವಾಗಿದೆ. ಇತ್ತೀಚೆಗಷ್ಟೇ ಚಿತ್ರದ ನಿರ್ಮಾಪಕ ನಾಗವಂಶಿ ನೀಡಿದ ಸಂದರ್ಶನದಲ್ಲಿ ವಿಡಿ 12 ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ರು.

ವಿಜಯ್ ದೇವರಕೊಂಡ ಅವರ ಚಿತ್ರದ ಬಜೆಟ್ 100 ಕೋಟಿ ಮೀರಲಿದೆ ಎಂದು ನಿರ್ಮಾಪಕ ನಾಗವಂಶಿ ಹೇಳಿದ್ದಾರೆ. ಈ ಬಜೆಟ್‌ ಹಾಕಿದ್ದು, ಹೀರೋ ನೋಡಿ ಅಲ್ಲ, ನಿರ್ದೇಶಕ ಗೌತಮ್ ತಿನ್ನನೂರಿ ಹಾಗೂ ಅನಿರುದ್ಧ್ ಅವರ ಮೇಲೆ ನಂಬಿಕೆ ಇಟ್ಟು ಈ ಬಜೆಟ್ ಮಾಡುತ್ತಿದ್ದೇವೆ ಎಂದು ಇಂಟರ್‌ವ್ಯೂ ಒಂದರಲ್ಲಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾ ಎಷ್ಟು ಹಿಟ್ ಆಗುತ್ತದೆ ಅಥವಾ ಫ್ಲಾಪ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನೂ ಚಿತ್ರದಲ್ಲಿ ನಾಯಕಿ ಬದಲಾವಣೆ ಮಾಡಿಲ್ಲ. ಶ್ರೀಲೀಲಾ ಬದಲಿಗೆ ರಶ್ಮಿಕಾ ಎಂಬ ಸುದ್ದಿಯಿದೆ ಆದರೆ ನಿಜವಾಗಿ ನಾವು ರಶ್ಮಿಕಾ ಅವರನ್ನು ಭೇಟಿಯಾಗಿಲ್ಲ. ಶ್ರೀಲೀಲಾ ಅವರು ನಮ್ಮ ಬ್ಯಾನರ್‌ನಲ್ಲಿ ಇನ್ನೂ ಹಲವು ಚಿತ್ರಗಳನ್ನು ಮಾಡುತ್ತಾರೆ. ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!