ಬರಲಿದೆ ಕೆಜಿಎಫ್-‌3: ಸಿನಿಮಾ ಕುರಿತು ಅಪ್ಡೇಟ್‌ ಕೊಟ್ಟ ವಿಜಯ್‌ ಕಿರಂಗದೂರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದ ರಾಕಿಂಗ್ ಸ್ಟಾರ್ ಯಶ್- ಪ್ರಶಾಂತ್ ನೀಲ್ ಜೋಡಿಯ ‘ಕೆಜಿಎಫ್’ ಸರಣಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಾಹುಬಲಿ 2 ನಂತರ, ಇದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ. ಕೆಜಿಎಫ್-2 ಕ್ಲೈಮ್ಯಾಕ್ಸ್‌ನಲ್ಲಿ ಪ್ರಶಾಂತ್ ನೀಲ್ ಕೆಜಿಎಫ್-3 ಇರಲಿದೆ ಎಂದು ಸುಳಿವು ನೀಡುವ ಮೂಲಕ ಅಭಿಮಾನಿಗಳಲ್ಲಿ ಹೆಚ್ಚಿನ ಆಸಕ್ತಿ ಶುರುವಾಗಿತ್ತು.

ಇನ್ನು ಕೆಜಿಎಫ್ 3 ಸಿನಿಮಾ ಫಾರಿನ್ ಬ್ಯಾಕ್‌ಡ್ರಾಪ್‌ನಲ್ಲಿ ಸೆಟ್ಟೇರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ರಾಖಿಭಾಯ್ ಅವರು ವಿದೇಶದಲ್ಲಿ ತನ್ನ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸಿದರು ಎಂಬ ಅಂಶದೊಂದಿಗೆ ಪ್ರಬಲ ಮೂರನೇ ಭಾಗವನ್ನು ಮಾಡಲು ಹೊರಟಿದ್ದಾರೆ ಎಂದು ಅಂದಾಜಿಸಲಾಗಿದೆ. ಇತ್ತೀಚೆಗಷ್ಟೇ ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾದ ಶೂಟಿಂಗ್ ಆರಂಭ ಮತ್ತು ರಿಲೀಸ್ ಡೇಟ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ‘ಕೆಜಿಎಫ್ 3’ ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

2025 ರಲ್ಲಿ ‘ಕೆಜಿಎಫ್-3’ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದೇನೆ ಎಂದು ನಿರ್ಮಾಪಕ ವಿಜಯ್ ಕಿರಂಗದೂರ್ ಬಹಿರಂಗಪಡಿಸಿದ್ದಾರೆ. 2026ರಲ್ಲಿ ಚಿತ್ರ ತೆರೆಕಾಣಲಿದ್ದು, ಪ್ರಶಾಂತ್ ನೀಲ್ ಅವರ ಪ್ರಸ್ತುತ ಕಮಿಟ್‌ಮೆಂಟ್‌ಗಳು ಮುಗಿದ ನಂತರ ‘ಕೆಜಿಎಫ್-3’ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಭಾಗ 2 ರ ಕೊನೆಯಲ್ಲಿ ರಾಕಿಭಾಯ್ ಕೆಜಿಎಫ್‌ಗೆ ಸೇರಿದ ಎಲ್ಲಾ ಚಿನ್ನವನ್ನು ಸಮುದ್ರಕ್ಕೆ ಎಸೆದು ಸ್ವತಃ ಸಮುದ್ರಕ್ಕೆ ಹಾರುತ್ತಾನೆ. ಭಾಗ 3 ಅಲ್ಲಿಂದ ಶುರುವಾಗಲಿದೆ. ಯಶ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಕೂಡ ಈ ಅಪ್‌ಡೇಟ್‌ನಿಂದ ಖುಷಿಯಾಗಿದ್ದಾರೆ. ವಿಜಯ್ ನೀಡಿರುವ ಮಾಹಿತಿ ಪ್ರಕಾರ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಎನ್ ಟಿಆರ್ ಜೊತೆಗಿನ ಸಿನಿಮಾ ಮುಗಿದ ನಂತರ ಕೆಜಿಎಫ್ 3 ಸಿನಿಮಾ ಬರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!