ದಿ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕರನ್ನು ಗಲ್ಲಿಗೇರಿಸಬೇಕು: ವಿವಾದಿತ ಹೇಳಿಕೆ ನೀಡಿದ ಎನ್​ಸಿಪಿ ನಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಒಂದೆಡೆ ವ್ಯಾಪಕ ಮೆಚ್ಚುಗೆ ಸಿಗುತ್ತಿದ್ದರೆ, ಇನ್ನೂ ಕೆಲವರಿಂದ ವಿರೋಧ ವ್ಯಕ್ತವಾಗಿದೆ.
ಇದೀಗ ಈ ಚಿತ್ರದ ನಿರ್ಮಾಪಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಎನ್​ಸಿಪಿ ನಾಯಕ ಜಿತೇಂದ್ರ ಅವ್ಹಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿಯೂ ಚಿತ್ರಕ್ಕೆ ಸಂಬಂಧಿಸಿದಂತೆ ರಾಜಕೀಯವು ತೀವ್ರಗೊಳ್ಳುತ್ತಿದೆ . ಚಿತ್ರದಲ್ಲಿ ಎಲ್ಲ ಸುಳ್ಳುಗಳನ್ನು ತೋರಿಸಲಾಗಿದೆ, ಚಿತ್ರ ನಿರ್ಮಾಪಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಹೇಳಿದ್ದಾರೆ.

32 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ ಆದರೆ ಅಧಿಕೃತ ಅಂಕಿ ಅಂಶ 3 ಆಗಿದೆ ಎಂದು ಅವರು ಹೇಳಿದರು. 32 ಸಾವಿರಕ್ಕೂ 3ಕ್ಕೂ ವ್ಯತ್ಯಾಸವಿಲ್ಲವೇ, ಈ ಕಾಲ್ಪನಿಕ ಕಥೆಯನ್ನು ನಿರ್ಮಿಸಿದ ನಿರ್ಮಾಪಕರು ಯಾರೇ ಆಗಿರಲಿ ಅವರನ್ನು ನೇಣಿಗೇರಿಸಬೇಕು ಎಂದು ಗುಡುಗಿದ್ದಾರೆ . ಇದೀಗ ಎಲ್ಲೆಡೆ ಇವರ ಮಾತಿಗೆ ಆಕ್ರೋಶವ್ಯಕ್ತವಾಗುತ್ತಿದೆ.

ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಈಗಾಗಲೇ ದೇಶದ ಎರಡು ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದ್ದರೂ, ಬಂಗಾಳ ಮತ್ತು ತಮಿಳುನಾಡಿನಲ್ಲಿ ಚಿತ್ರವು ಥಿಯೇಟರ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!