ಉತ್ಪನ್ನಗಳಲ್ಲಿ ದೋಷ: ಅಮೆರಿಕ ಮಾರುಕಟ್ಟೆಯಿಂದ ಔಷಧಿ ವಾಪಸ್ ಪಡೆದ ಸಿಪ್ಲಾ, ಗ್ಲೆನ್‌ಮಾರ್ಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಉತ್ಪನ್ನಗಳಲ್ಲಿ ಕಂಡುಬಂದ ದೋಷಗಳ ಹಿನ್ನೆಲೆಯಲ್ಲಿ ಔಷಧ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ ಹಾಗೂ ಗ್ಲೆನ್‌ಮಾರ್ಕ್ ಅಮೆರಿಕದ ಮಾರುಕಟ್ಟೆಯಿಂದ ತಮ್ಮ ಔಷಧಿಗಳನ್ನು ಹಿಂದಕ್ಕೆ ಪಡೆದಿದೆ.

ಆಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿ ಪ್ಯಾಕೆಟ್‌ಗಳಲ್ಲಿ ಕಡಿಮೆ ಪ್ರಮಾಣದ ಔಷಧ ತುಂಬಲಾಗಿದೆ ಎಂಬ ದೂರುಗಳು ಕೇಳಿಬಂದ ಕಾರಣ ಔಷಧಗಳನ್ನು ವಾಪಸ್ ಪಡೆಯಲಾಗಿದೆ.

ಅಮೆರಿಕದ ಆಹಾರ ಮತ್ತು ಔಷಧ ಮಂಡಳಿ ವರದಿ ಪ್ರಕಾರ, ಸಿಪ್ಲಾದ ಅಧೀನ ಸಂಸ್ಥೆಯು ಇಪ್ರಾಟ್ರೊಪಿಯಂ ಬ್ರೊಮೇಡ್ ಮತ್ತು ಅಬ್ಲುಟೆರೋಲ್ ಸಲ್ಫೇಟ್ ಇನ್ಹೇಲೇಷನ್ ಸಲ್ಯೂಷನ್‌ನ 59,244 ಪ್ಯಾಕೆಟ್‌ಗಳನ್ನು ವಾಪಸ್ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!