ಕುವೆಂಪು ವಿವಿ ಕುಲಪತಿಯಾಗಿ ಪ್ರೊ.ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ

ಹೊಸದಿಗಂತ ವರದಿ, ಶಿವಮೊಗ್ಗ:

ಕುವೆಂಪು ವಿವಿಯ ನೂತನ ಕುಲಪತಿಯಾಗಿ ಡಾ. ಶರತ್ ಅನಂತಮೂರ್ತಿ  ಗುರುವಾರ  ಅಧಿಕಾರ ಸ್ವೀಕರಿಸಿದರು.

ರಾಜ್ಯಪಾಲ ಡಾ. ತಾವರ್ ಚಂದ್ ಗೆಹ್ಲೋಟ್  ಅವರು ಡಾ. ಶರತ್ ಅವರನ್ನು ಪೂರ್ಣಾವಧಿ ಕುಲಪತಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು.

ಪ್ರೊ. ಶರತ್ ಅನಂತಮೂರ್ತಿ ಕರ್ನಾಟಕದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಡಾ. ಯು ಆರ್ ಅನಂತಮೂರ್ತಿ ಅವರ ಪುತ್ರ. ಇವರು ಅಮೆರಿಕಾದ ಪ್ರತಿಷ್ಠಿತ ಅಯೋವಾ ಸ್ಟೇಟ್ ವಿಶ್ವವಿದ್ಯಾಲಯದಿಂದ ಪಿಹೆಚ್. ಡಿ. ಪದವಿ ಪಡೆದಿದ್ದಾರೆ. ಪ್ರೊ. ಶರತ್ ಬೆಂಗಳೂರು ವಿವಿಯಲ್ಲಿ 2017ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ನಂತರ ಹೈದರಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕುವೆಂಪು ಹೆಸರಿನ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ. ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ, ಸಂವಾದಗಳು ನಡೆಯಬೇಕು. ವಿವಿಯನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಕೇಂದ್ರಿತವನ್ನಾಗಿಸಿ ಮುಕ್ತ ಮತ್ತು ನಿರ್ಭಿಡೆಯ ವಾತಾವರಣ ನಿರ್ಮಿಸುವುದರತ್ತ ಗಮನ ಹರಿಸುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!