ಹೊಸದಿಗಂತ ವರದಿ,ವಿಜಯಪುರ:
ಭೀಕರ ಯುದ್ಧಭೂಮಿಯ ಇಸ್ರೇಲ್‌ನಲ್ಲಿ ಜಿಲ್ಲೆಯ ಸಹಾಯಕ ಪ್ರಾಧ್ಯಾಪಕರೊಬ್ಬರು ಸಿಲುಕಿಕೊಂಡಿರುವುದು ತಿಳಿದು ಬಂದಿದೆ.
ವಿಜಯಪುರ ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಮೇಶ್ ಗೋವಿಂದ ಇಸ್ರೇಲ್ ನಲ್ಲಿ ಸಿಲುಕಿಕೊಂಡಿದ್ದು, ನಾಳೆ ಜೆರುಸೆಲಂ ನಿಂದ ವಿಮಾನ ಮೂಲಕ ಸ್ವದೇಶಕ್ಕೆ ಆಗಮಿಸುವ ಕುರಿತು ವಿಡಿಯೋದಲ್ಲಿ ತಿಳಿಸಿದ್ದಾರೆ.
ಇಸ್ರೇಲ್‌ನ ಜೆರುಸೆಲಂ ನಗರದ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತಿದೆ. ಎರಡು ದಿನಗಳಲ್ಲಿ ಸ್ವದೇಶಕ್ಕೆ ಬರುವುದಾಗಿ ಡಾ. ಸುಮೇಶ್ ಗೋವಿಂದ ಹೇಳಿದ್ದಾರೆ. ಮಾಧ್ಯಮದವರು ಹಾಗೂ ವಿಶ್ವವಿದ್ಯಾಲಯದವರಿಗೆ ಸುಮೇಶ್ ಗೋವಿಂದ ಧನ್ಯವಾದ ಹೇಳಿದ್ದು, ಇಸ್ರೇಲ್‌ನ ಹೆಬ್ರು ವಿಶ್ವವಿದ್ಯಾಲಯದಲ್ಲಿ ನಡೆದ ತರಬೇತಿಗೆ ಸಹಾಯಕ ಪ್ರಾಧ್ಯಾಪಕರು ತೆರಳಿದ್ದರು. ಆ 7 ರಿಂದ ಆರಂಭಗೊಂಡಿದ್ದ ತರಬೇತಿ ಅ. 22ರಂದು ತರಬೇತಿ ಮುಗಿಸಿ, ಅ. 27ಕ್ಕೆ ವಾಪಸ್ ಸ್ವದೇಶಕ್ಕೆ ಆಗಮಿಸಬೇಕಿದ್ದ ಸುಮೇಶ್, ಅಷ್ಟರಲ್ಲಿ ಹಮಾಸ್ ಉಗ್ರರಿಂದ ಇಸ್ರೇಲ್ ಮೇಲೆ ದಾಳಿ ಹಿನ್ನೆಲೆ ವಿಶ್ವವಿದ್ಯಾಲಯದಿಂದ ತರಬೇತಿ ರದ್ದಾಗಿದ್ದು, ಲಾಡ್ಜ್ ನಲ್ಲಿ ಸುಮೇಶ್ ಇದ್ದಾರೆ.