ಮೀನುಗಾರರ ಮಾರುಕಟ್ಟೆ ವಿಸ್ತರಣೆಗೆ ಯೋಜನೆಗಳು ಸಹಕಾರಿ: ಮಂಗಳೂರಿನಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು,ಮಂಗಳೂರಲ್ಲಿ 3800 ಕೋಟಿ ಮೊತ್ತದ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ, ಭೂಮಿ ಪೂಜೆ ಆಗಿದೆ. ಕರ್ನಾಟಕದಲ್ಲಿ ಈ ಯೋಜನೆಗಳ ಮೂಲಕ ಹುದ್ದೆಗಳು ಸೃಷ್ಟಿಯಾಗಲಿದೆ ಎಂದು ಮೋದಿ ಹೇಳಿದರು. ಈ ಯೋಜನೆಗಳಿಂದ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ, ಈ ಮೂಲಕ ಮೀನುಗಾರರು ತಮ್ಮ‌ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಇದಕ್ಕೂ ಮುನ್ನ ಕೇರಳದಲ್ಲಿ ಐಎನ್‌ಎಸ್‌ ವಿಕ್ರಾಂತ್‌ ನೌಕೆಯನ್ನು ಅನಾವರಣಗೊಳಿಸಿದ ನಂತರ ರಾಷ್ಟ್ರ ನೌಕಾದಳಕ್ಕೆ ಸೇರ್ಪಡೆಯಾಯಿತು. ಈ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ ಮೋದಿ, ರಾಷ್ಟ್ರ ಸೈನ್ಯದ ಸುರಕ್ಷಿತವಾಗಿದ್ದರೆ ಆರ್ಥಿಕವಾಗಿ ಭಾರತ ಸುರಕ್ಷಿತವಾಗಿರತ್ತದೆ ಎಂದರು

ಮೇಕ್‌ ಇನ್ ಇಂಡಿಯಾ ವಿಸ್ತರಿಸುವುದು ಬಹಳ ಪ್ರಮುಖವಾದದ್ದು. ಕರಾವಳಿ ಪ್ರದೇಶಗಳಲ್ಲಿ ಸಾಗರಮಾಲಾ ಯೋಜನೆ ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ. ಕಳೆದ ಎಂಟು‌ ವರ್ಷದಲ್ಲಿ ಬಂದರು ವಹಿವಾಟು ಹೆಚ್ಚಾಗಿದೆ. ಮುಂದಿನ‌ ವರ್ಷಗಳಲ್ಲಿ ಬಂದರುಗಳ ಸಾಮರ್ಥ್ಯ ಹೆಚ್ಚಳ ಮಾಡಲಾಗುತ್ತದೆ ಎಂದು ಮೋದಿ ತಿಳಿಸಿದರು.

ಒಂದು ಜಿಲ್ಲೆ ಒಂದು ಉತ್ಪನದ ಪ್ರಾಮುಖ್ಯತೆಯನ್ನು ಅವರು ತಿಳಿಸಿಕೊಟ್ಟರು. ಇನ್ನೂ 8 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೂಲ ಭೂತ ಸೌಕರ್ಯಗಳಲ್ಲಿ ಬದಲಾವಣೆಯಾಗಿದ್ದು, ಅದರ ಲಾಭವನ್ನು ಕರ್ನಾಟಕ ಪಡೆದುಕೊಂಢಿದೆ. 30 ಲಕ್ಷ ಹೆಚ್ಚು ಬಡತನ ಕುಟುಂಬಕ್ಕೆ ಆಯ್ಮುಶಾನ್‌ ಕಾರ್ಡ್‌ ನೀಡಲಾಗಿದೆ. ಇದಲ್ಲದೇ 30 ಲಕ್ಷಕ್ಕೂ ಅಧಿಕ ಮಂದಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗಿದೆ ಅಂತ ಹೇಳಿದರು.

ಇನ್ನೂ ರೈತರು, ಮೀನುಗಾರರು, ಸಣ್ಣಪುಟ್ಟ ವ್ಯಾಪಾರಿಗಳು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅಂತ ತಿಳಿಸಿದರು. 21 ನೇ ಶತಮಾನದಲ್ಲಿ, ಭಾರತವು ‘ಹಸಿರು ಬೆಳವಣಿಗೆ’ಯ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ. ಕರ್ನಾಟಕದ ಸಂಸ್ಕರಣಾಗಾರಗಳಲ್ಲಿ ಬಳಸಲಾಗುವ ತಂತ್ರಜ್ಞಾನವು ಈ ಉದ್ದೇಶದೊಂದಿಗೆ ಸಿಂಕ್ ಆಗಿದೆ. ಅಮೃತ್ ಕಾಲ್ ಸಮಯದಲ್ಲಿ, ಭಾರತವು ಹಸಿರು ಬೆಳವಣಿಗೆ ಮತ್ತು ಹಸಿರು ಉದ್ಯೋಗಗಳ ಮನಸ್ಥಿತಿಯೊಂದಿಗೆ ಮುಂದುವರಿಯುತ್ತಿದೆ

ಕರ್ನಾಟಕ ಸಾಗರಮಾಲ ಯೋಜನೆಯ ದೊಡ್ಡ ಫಲಾನುಭವಿ ಆಗಲಿದೆ. ಬೆಂಗಳೂರು – ಚೆನ್ನೈ ಎಕ್ಸ್ ಪ್ರೆಸ್, ಬೆಂಗಳೂರು ‌ಮೈಸೂರು ಎಕ್ಸ್‌ಪ್ರೆಸ್‌, ಹೀಗೆ ಹಲವು ಯೋಜನೆಗಳನ್ನ ರಸ್ತೆ ಮಾರ್ಗಕ್ಕಾಗಿ ಮಾಡಲಾಗ್ತಿದೆ. ದೇಶ ಹೊಸ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮೋದಿ ಹೇಳಿದರು.

ಕರ್ನಾಟಕದಲ್ಲಿ 8 ಲಕ್ಷ‌ ಮ‌ನೆಗಳನ್ನ ನಿರ್ಮಾಣ ಮಾಡಲಾಗ್ತಿದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ನೀರು‌ ಕಲ್ಪಿಸುವ ಯೋಜನೆ ಮಾಡಲಾಗಿದೆ. 30 ಲಕ್ಷ ಮನೆಗಳಿಗೆ ಜಲಜೀವನ್ ಯೋಜನೆ ಅಡಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಮೋದಿಮಾಹಿತಿ ನೀಡಿದರು.

ಡಬಲ್ ಇಂಜಿನ್ ಸರ್ಕಾರದ ಕುರಿತು ನನಗೆ ಖುಷಿ ಇದೆ ಎಂದ ಪ್ರಧಾನಿ ನರೇಂದ್ರ ಮೋದಿ, ತೀವ್ರಗತಿಯಲ್ಲಿ ಅಭಿವೃದ್ಧಿಯ ಕಾರ್ಯಕ್ರಮ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾಷಣದ ವೇಳೆ ರಾಜ್ಯದ ರಾಣಿ ಅಬ್ಬಕ್ಕ, ರಾಣಿ ಚೆನ್ನ ಭೈರಾದೇವಿ ಅವರನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಬ್ರಿಟೀಷರಿಂದ ತಮ್ಮ ರಾಜ್ಯ ಉಳಿಸಿಕೊಳ್ಳಲು ಹೋರಾಡಿದ್ದು ನಮಗೆ ಎಂದೆಂದಿಗೂ ಸ್ಪೂರ್ತಿ. ಅಮೃತ ‌ಮಹೋತ್ಸವದ ಈ ಸಂದರ್ಭದಲ್ಲಿ ಇವರ ಹೋರಾಟ ನೆನೆಯುತ್ತೇನೆ ಎಂದು ಮೋದಿಯವರು ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಇಡೀ ದೇಶಾದ್ಯಂತ ಕರಾವಳಿ ಉತ್ಪನ್ನಗಳು ಮತ್ತು ವಹಿವಾಟು ವ್ಯಾಪಕವಾಗಿ ಬೆಳೆದಿದೆ. ತಂತ್ರಜ್ಞಾನವನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಪ್ರಯತ್ನದಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೀನುಗಾರರ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೊಗೊಳ್ಳಲಾಗಿದೆ. ಈಗ ಚಾಲನೆ ನೀಡಿರುವ ಯೋಜನೆಗಳಿಂದ ವ್ಯಾಪಕ ಉದ್ಯೋಗ ಸೃಷ್ಟಿಯಾಗುವುದಲ್ಲದೇ ಆರ್ಥಿಕ ಬೆಳವಣಿಗೆಯೂ ಆಗಲಿದೆ ಎಂದರು. ದೇಶದ ಹಲವು ನಗರಗಳಲ್ಲಿ ಮೆಟ್ರೋ ನಿರ್ಮಾಣ ವೇಗದಿಂದ ಆಗುತ್ತಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸುಲಭ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲವೂ ನಮ್ಮ ಸರ್ಕಾರದ ಕಳೆದ ಎಂಟು ವರ್ಷಗಳ ಸಾಧನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!