BEAUTY TIP| ಬಿಸಿಲ ಬೇಗೆಯಿಂದ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಸಿಲ ಪ್ರಖರತೆ ಜೋರಾಗಿದೆ. ಕಡುಬಿಸಿಲು ಚರ್ಮದ ಅತಿದೊಡ್ಡ ಶತ್ರು ಎಂದರೆ ತಪ್ಪಲ್ಲ. ಬಿಸಿಲ ಝಳದಿಂದ ಚರ್ಮವನ್ನು ರಕ್ಷಿಸಿಕೊಳ್ಳದಿದ್ದರೆ ಚರ್ಮವು ಒಣಗಿ ಅನಾರೋಗ್ಯಕರವಾಗುತ್ತದೆ. ಸಮರ್ಪಕ ರೀತಿಯಲ್ಲಿ ಚರ್ಮದ ಆರೈಕೆ ಮಾಡಿದ್ದೇ ಆದಲ್ಲಿ ಉರಿ, ತುರಿಕೆ, ಮೊಡವೆ, ಕಲೆಗಳು ದೂರವಾಗುವುದಲ್ಲದೆ ಚರ್ಮ ಹೊಳಪಿನಿಂದ ಕೂಡಿ ಆಕರ್ಷಕವಾಗುತ್ತವೆ.ನಿಮ್ಮ ಸೌಂದರ್ಯವು ನಿಮ್ಮ ಚರ್ಮದಿಂದ ಹೊರಹೊಮ್ಮುತ್ತದೆ ಎಂಬ ಮಾತೊಂದಿದೆ. ಚರ್ಮವು ಸುಂದರವಾಗಿ ಆರೋಗ್ಯಕರವಾಗಿ ಹಾಗೆಯೇ ಸ್ವಚ್ಛವಾಗಿಡುವುದು ಮುಖ್ಯ. ಕೆಲಸ ಕಾರ್ಯಗಳ ಒತ್ತಡದ ಜೊತೆ ಜೊತೆಗೆ ಬಿಸಿಲ ಝಳ, ಕಲುಷಿತ ವಾತಾವರಣದಿಂದಾಗಿ ಚರ್ಮ ಹಾಳಾಗುತ್ತಿವೆ. ಈ ಬಗ್ಗೆ ಆರಂಭದಲ್ಲೇ ಕಾಳಜಿ ವಹಿಸಿ, ಜಾಗ್ರತೆ ವಹಿಸುವುದು ಅತೀ ಅಗತ್ಯ.

ಮುಖದ ಚರ್ಮ ಚೆನ್ನಾಗಿರಲು ಈ ಟಿಪ್ಸ್‌ ನಿಮಗೆ ಸಹಕಾರಿಯಾಗುತ್ತದೆ. ಚರ್ಮವನ್ನು ದಿನದಲ್ಲಿ ಎರಡರಿಂದ ಮೂರು ಸಲ ಮಾತ್ರ ಕ್ಲೆನ್ಸರ್‌ ಬಳಸಿ ಶುಚಿಮಾಡಿಕೊಳ್ಳಿ. ಇದರಿಂದ ತ್ವಚೆಯಲ್ಲಿರುವ ಜಿಡ್ಡಿನಂಶ ಜೊತೆಗೆ ಕೊಳೆಯು ಹೋಗಿ ಶುಭ್ರವಾಗುವುದು. ರಾತ್ರಿ ಮಲಗುವ ಮೊದಲು ಮುಖವನ್ನು ಕ್ಲೆನ್ಸರ್‌ನಿಂದ ಶುಚಿಗೊಳಿಸಿ. ನಂತರ ಶುಭ್ರವಾದ ನೀರಿನಿಂದ ಮುಖ ತೊಳೆದು ಶುಭ್ರ ಬಟ್ಟೆಯಿಂದ ಮೆದುವಾಗಿ ಒರೆಸಿಕೊಳ್ಳಿ.

ತೀಕ್ಷ್ಣ ಬಿಸಿಲು ಚರ್ಮದ ದೊಡ್ಡ ಶತ್ರು. ಸೂರ್ಯನಿಂದ ಬರುವ ಅತಿನೇರಳೆ ತಾಪಮಾನ ಕಿರಣಗಳು ಚರ್ಮವನ್ನು ಸತ್ವಹೀನವನ್ನಾಗಿಸುತ್ತದೆ. ಜೊತೆಗೆ ಚರ್ಮ ಸುಕ್ಕುಕಟ್ಟುವಂತೆ ಮಾಡುತ್ತದೆ. ಇವುಗಳಿಂದ ರಕ್ಷಣೆ ಪಡೆಯಲು ಸನ್‌ ಸ್ಕ್ರೀನ್‌ ಲೋಶನ್‌ ಬಳಸುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!