ಸನಾತನದ ರಕ್ಷಣೆ ದೇಶದ ಪ್ರತಿ ಹಿಂದುಗಳ ಹೊಣೆ: ಪುಷ್ಪೇಂದ್ರ ಕುಲಶ್ರೇಷ್ಠ

ಹೊಸದಿಗಂತ ವರದಿ, ಬೀದರ್:

ಈ ದೇಶದ ಸನಾತನ ಅಪಾಯದ ಅಂಚಿನಲ್ಲಿದ್ದು, ಅದರ ರಕ್ಷಣೆ ಮಾಡುವುದು ಭಾರತಾಂಬೆಯ ಗಾಳಿ, ನೀರು ಹಾಗೂ ಆಹಾರ ಸೇವನೆ ಮಾಡುವ ಹಾಗೂ ರಾಷ್ಟ್ರಾಭಿಮಾನ ಹೊಂದಿರುವ ಇಲ್ಲಿಯ ಪ್ರತೊಯೊಬ್ಬ ಹಿಂದುಗಳ ಆದ್ಯ ಕರ್ತವ್ಯವಾಗಿದೆ ಎಂದು ಖ್ಯಾತ ಚಿಂತನಕಾರ ಪುಷ್ಪೇಂದ್ರ ಕುಲಶ್ರೇಷ್ಠ ಕರೆ ನೀಡಿದರು.
ಭಾನುವಾರ ನಗರದ ಗುಂಪಾ ರಸ್ತೆಯಲ್ಲಿರುವ ಕರ್ನಾಟಕ ಫಾರ್ಮಷಿ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಜಾಗರಣ ಸಮಿತಿ ಜಿಲ್ಲಾ ಘಟಕವು ಆಯೋಜಿಸಿದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಅವರು, ಮನೆ ಹಾಗೂ ಕುಟುಂಬದಿಂದ ನಾವು ಯಾವ ಜಾತಿ ಅಥವಾ ಧರ್ಮಿಯರೆ ಆಗಿರಲಿ ನಮ್ಮ ಜಾತಿ, ಮತ ಕೇವಲ ನಮ್ಮ ದ್ವಾರಕ್ಕೆ ಸೀಮಿತವಾಗಿರಬೇಕು. ಸಮಾಜದಲ್ಲಿ ಬಂದಾಗ ನಾವು ಹಿಂದುಗಳು, ಭಾರತೀಯರು, ಸನಾತನಿಗಳು, ದೇಶ ರಕ್ಷಕರು ಎಂಬ ಭಾವನೆ ನಮ್ಮಲ್ಲಿ ಜಾಗೃತಗೊಳ್ಳಬೇಕು ಎಂದರು.
ಸನಾತನ ಎಂದರೆ ವಿಜ್ಞಾನ ಎಂದರ್ಥ. ಸನಾತನಕ್ಕೆ ತನ್ನದೆ ಆದ ಇತಿಹಾಸವಿದೆ, ಪರೆಂಪರೆ ಇದೆ. ಆದರೆ ಈ ದೇಶದ ಅನ್ನ ನೀರು ಹಾಗೂ ವಾಯು ಸೇವಿಸಿ ದೇಶದಲ್ಲಿ ಪಠಿಸುವ ವಂದೆ ಮಾತ್ರಂ ಎಂಬ ಗೀತೆಗೆ ಅವಮಾನ ಮಾಡುವ ಅಥವಾ ಅದನ್ನು ಪಾಲಿಸದ ದೇಶದ್ರೋಹಿ ಜಿಹಾದಿಗಳಿಗೆ ಯಾವ ಇತಿಹಾಸವಿಲ್ಲ, ಸಂಸ್ಕೃತಿಯಿಲ್ಲ. ಒಂದು ಧರ್ಮದ ಹೆಸರಲ್ಲಿ ಪಕ್ಷ ಕಟ್ಟಿ ಕೋಮುವಾದ ಸೃಷ್ಟಿ ಮಾಡುವವರಿಂದ ನಾವು ಎಚ್ಚರದಿಂದಿರಬೇಕೆಂದು ಪ್ರತಿಪಾದಿಸಿದರು.
ಈ ದೇಶದ ಸನಾತನದ ಮೂಲ ನಿವಾಸಿಗಳಾದ 2500 ಕಾಶ್ಮಿರಿ ಪಂಡಿತರನ್ನು ಕೊಂದು, 5.5 ಲಕ್ಷ ಪಂಡಿತರನ್ನು ಅಲ್ಲಿಂದ ಓಡಿಸಿದ ಆ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಈ ದೇಶದ 85 ಕೋಟಿ ನಿಜವಾದ ಸನಾತನಿಯರು ಜಾಗೃತರಾಗಬೇಕಿದೆ. ಓರ್ವ ವಿದ್ವಾಂಸರು ಹೇಳಿದಂತೆ ಪಕ್ಕದ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ, ಚೀನಾಗಿಂತಲೂ ನಮ್ಮ ದೇಶದಲ್ಲಿದ್ದುಕೊಂಡು ನಮಗೆ ನಿಜ ಶತ್ರುಗಳಾಗಿ ಕಾಡುತ್ತಿರುವ ಸುಮಾರು 30 ಕೋಟಿ ದೇಶಭ್ರಷ್ಟರಿಂದ ನಾವು ಸದಾ ಜಾಗೃತರಾಗಿರಬೇಕೆಂದರು.
ದೇಶ 1947ರಂದು ಸ್ವತಂತ್ರವಾಯಿತು ಎಂದು ಹೇಳುತ್ತೇವೆ. ಆದರೆ ನಿಜವಾದ ಸ್ವತಂತ್ರ ಇನ್ನು ದೊರೆತಿಲ್ಲ. ನಮ್ಮ ದೇಶದ ಸುಮಾರು 40 ಸಾವಿರ ದೇವಾನು ದೇವತೆಗಳು ಎಲ್ಲಿ ಮಾಯವಾದವು. ಅವುಗಳನ್ನು ಪತ್ತೆ ಹಚ್ಚಿ ಪುನಃ ಈ ಪುಣ್ಯ ಭೂಮಿಯಲ್ಲಿ ಆ ದೇವತೆಗಳ ಉಗಮವಾದಾಗ ನಿಜವಾದ ಸ್ವತಂತ್ರ ಸಿಗುವುದು. 1947 ಆಗಸ್ಟ್ 14ರಂದು ಮಾಜಿ ಗೃಹ ಮಂತ್ರಿ ಸರ್ದಾರ ವಲ್ಲಭಭಾಯಿ ಪಟೇಲರ ಚಾಣಾಕ್ಷದಿಂದ ಮದ್ರಾಸ್‍ನ ಸಂಗೀತಗಾರ ಪಂಡಿತ ಓಂಕಾರನಾಥ ಠಾಕೂರರನ್ನು ಕರೆಯಿಸಿ 4 ನಿಮಿಸ 48 ಸೆಕೆಂಡಗಳ ವರೆಗೆ ಸಂಪೂರ್ಣ ವಂದೆ ಮಾತ್ರಂ ಗೀತೆ ಹಾಡಿದ ನಂತರ ಎಪ್ಪತ್ತು ವರ್ಷಗಳ ವರೆಗೆ ಈ ದೇಶದಲ್ಲಿ ಸಂಪೂರ್ಣ ವಂದೆ ಮಾತ್ರಂ ಗೀತೆ ಹಾಡಲೇ ಇಲ್ಲ. 2014ರ ನಂತರ ಮತ್ತೆ ಈ ದೇಶದಲ್ಲಿ ಸಂಪುರ್ಣ ವಂದೆ ಮಾತ್ರಂ ಗೀತೆ ಹಾಡುವ ಮುಕ್ತ ಅವಕಾಶ ದೊರೆಯಿತು ಎಂದವರು ಹೇಳಿದರು.
1995 ಹಾಗೂ 2013ರಂದು ಈ ದೇಶದಲ್ಲಿ ಸಿಕ್ಕ ಆಸ್ತಿಗಳೆಲ್ಲ ವಕ್ ಬೋರ್ಡ್ ಆಸ್ತಿ ಎಂದು ಘೋಷಿಸಿ ಕೊಟ್ಯಾಂತರ ಹಿಂದುಗಳ ಹಗಲು ದರೊಡೆ ಶುರುವಾಯಿತು. ನಾಲ್ಕು ಖಾಸಗಿ ವ್ಯಕ್ತಿ ಕುಳಿತುಕೊಂಡು ರಚಿಸಿದ ಈ ಬೋರ್ಡ್‍ನಲ್ಲಿ ಸರ್ಕಾರಿ ಅಧಿಕಾರಿಗಳು ಗುಲಾಮರಾಗಿ ಕೆಲಸ ಮಾಡುತ್ತಿರುವುದು ದೊಡ್ಡ ದುರಂತವೇ ಸರಿ ಎಂದರು.
ಎಪ್ಪತ್ತು ವರ್ಷಗಳ ನಂತರ ಸನಾತನಿಯರು ಸಿಡಿದೆದ್ದು 2014ರಂದು ದಿಲ್ಲಿಯಲ್ಲಿ ಸನಾತನ ಸರ್ಕಾರ ತರುವಲ್ಲಿ ಯಶಸ್ವಿಯಾದರು. ಆದರೆ ರಾಜ್ಯ ಸಭೆಯಲ್ಲಿ ಆವಾಗ ಆ ಸರ್ಕಾರಕ್ಕೆ ಬಹುಮತವಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಗೃಹ ಸಚಿವ ಅಮಿತ ಶಾಹ ಅವರ ಚಾಣಾಕ್ಷತನದಿಂದ ಕಾಂಗ್ರೆಸ್‍ನ 50 ಜನ ರಾಜ್ಯ ಸಭೆ ಸದಸ್ಯರನ್ನು ನೆದಲ್ರ್ಯಾಂಡ್‍ಗೆ ಅಲ್ಲಿಯ ಜಲ ಸಂವರ್ಧನೆ ವ್ಯವಸ್ಥೆ ಬಗ್ಗೆ ಅಧ್ದಯಯನಕ್ಕಾಗಿ ಕರೆದೊಯ್ದು ಇತ್ತ ರಾಜ್ಯ ಸಭೆಯಲ್ಲಿ ಕಲಂ 370 ಹಾಗೂ 35 ಪರಿಶ್ಚೇದಗಳನ್ನು ತಿದ್ದುವ ಮೂಲಕ ಈ ದೇಶದ ಸ್ವರ್ಗವಾದ ಕಾಶ್ಮಿರವನ್ನು ಸ್ವತಂತ್ರಗೊಳಿಸುವಲ್ಲಿ ಯಸಸ್ಸು ಕಂಡಿತ್ತು. ಈ ಪೂಣ್ಯ ಕಾರ್ಯವನ್ನು ಮೆಚ್ಚಿ ಸನಾತನಿಯರು ಮತ್ತಷ್ಟು ಹೆಚ್ಚಿನ ಬಹುಮತದಿಂದ ಅದೇ ಸರ್ಕಾರವನ್ನು 2019ರಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ಸು ಕಂಡರು. ಇಲ್ಲಿಯ 5 ಕೋಟಿ ಸನಾತನಿಯರ ಶಕ್ತಿಯಿಂದ ಇಂದು ಕರ್ನಾಟಕ ವಿಧಾನ ಸೌಧದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಲು ಸಾಧ್ಯವಾಯಿತು. ಹೀಗೆ ನಾವಿನ್ನು ಮಲಗದೇ ಮುಂದಿನ 500 ವರ್ಷಗಳ ವರೆಗೆ ಹೀಗೆ ಜಾಗೃತವಾದಾಗ ಮಾತ್ರ ಸಂಪೂರ್ಣ ಸನಾತನ ದೇಶವಾಗಿ ಭಾರತ ಹೊರ ಹೊಮ್ಮಲು ಸಾಧ್ಯವಿದೆ ಎಂದರು.
ಓರ್ವ ಜೈನ ಧರ್ಮದ ಸಹೋದರರಾದ ವಿಶ್ಣುಶಂಕರ ಜೈನ್ ಅವರು ಸುಪ್ರಿಮ್ ಕೋರ್ಟ್‍ನಲ್ಲಿ ವಾದ ಮಂಡಿಸಿ ವಾರಣಾಸಿಯ ಒಂದು ಮಸಿದಿಯಲ್ಲಿ ಶಿವಲಿಂಗವಿದೆ. ಇಲ್ಲಿ ಶಿವಮಂದಿರ ಇತ್ತು. ಅಲ್ಲಿ ನಂದಿಯ ಪೂಜೆ ನಡೆಯುತ್ತಿತ್ತು ಎಂಬುದನ್ನು ವಾದಿಸಿದಕ್ಕಾಗಿಯೇ 2018ರ ಜುಲೈ 31ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಅರುಣ ಮಿಶ್ರಾ ಹಾಗೂ ನ್ಯಾ.ಅಮಿತಾಬ್ ರೋಹಿಬ್ ಅವರು ತೀರ್ಪೂ ನೀಡಿ ಈ ದೇಶದಲ್ಲಿನ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಶಾಲಾ, ಕಾಲೇಜುಗಳು, ಬಸ್ ನಿಲ್ದಾಳಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿರುವ ಮಸಿದಿಗಳು, ಗೋರಿಗಳು, ಸಮಾಧಿಗಳನ್ನು ಆಯಾ ರಾಜ್ಯ ಸರ್ಕಾರಗಳು ತೆರವುಗೊಳಿಸಬೇಕೆಂದು ತೀರ್ಪು ನೀಡಿದರು. ಆದರೆ ಈ ವಿಷಯ ಯಾವ ಸರ್ಕಾರಗಳು ಈ ದೇಶದ 85 ಕೋಟಿ ಸನಾತನಿಯರಿಗೆ ಮಾಹಿತಿ ನೀಡದೇ ಇರುವುದು ವಿಷಾದನಿಯ ಸಂಗತಿ ಎಂದರಲ್ಲದೇ ಇನ್ನು ಮುಂದೆ ಪ್ರತಿಯೊಬ್ಬ ಹಿಂದುಗಳು ತಮ್ಮ ನಗರ ಹಾಗೂ ಪಟ್ಟಣಗಳು ಮತ್ತು ಗ್ರಾಮಗಳಲ್ಲಿರುವ ಸಾರ್ವಜನಿಕ ಸ್ಥಳಗಳಲ್ಲಿ ನೆಲೆಯೂರಿರುವ ಅಕ್ರಮ ಗೋರಿಗಳು, ಮಸಿದಿಗಳು, ಚರ್ಚ್‍ಗಳು ಹಾಗೂ ಸಮಾಧಿಗಳನ್ನು ತೆರುವುಗೊಳಿಸಲು ಅನುಕುಲವಾಗುವಂತೆ ಕೇವಲ ಅಲ್ಲಿ ನಿಂತು ಒಂದು ಸೆಲ್ಪಿ ಫೋಟೊ ಗಿಟ್ಟಿಸಿ ನಮಗೆ ಕಳುಹಿಸಿದರೆ ಈ ದೆಶದ ಎಲ್ಲ ಆಕ್ರಮ ಆಸ್ತಿಗಳನ್ನು ತೆರವುಗೊಳಿಸಲು ಅನುಕುಲ ಆಗಲಿದೆ ಎಂದರು.
ನಾವು ನಿಜವಾದ ಸನಾತನಿಗಳಾಗಿ ಬದುಕಲು ಸರ್ಕಾರ ಈರುಳ್ಳಿ ಬೆಲೆ ಹೆಚ್ಚು ಮಾಡಿದೆ, ಪೆಟ್ರೋಲ್ ಬೆಲೆ ಜಾಸ್ತಿ ಮಾಡಿದೆ ಎಂದು ಕಿರುಚಾಡಬೇಡಿ, ಈ ದೇಶದ ಕೇಂದ್ರ ಹಾಗೂ ಎಲ್ಲ ರಾಜ್ಯಗಳಲ್ಲಿ ಸನಾತನ ಸರ್ಕಾರಗಳು ಅಧಿಕಾರಕ್ಕೆ ತರುವಲ್ಲಿ ಪ್ರತಿಯೊಬ್ಬರು ಯೋಧರಂತೆ ಕೆಲಸ ಮಾಡುವಂತೆ ಕುಲಶ್ರೇಷ್ಠ ಕರೆ ಕೊಟ್ಟರು.
ಸಿದ್ಧರಾಢ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಜಾಗರಣ ಸಮಿತಿಯ ಅಧ್ಯಕ್ಷ ಶಂಕರ್‍ರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಜಕುಮಾರ ಬಿಜ್ಜಾ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಕು.ಸೋಮೇಶ್ವರಿ ರಾಮಲಿಂಗ ವಂದೇ ಮಾತ್ರಂ ಗೀತೆ ಹಾಡಿದರು. ರಾಷ್ಟ್ರೀಯ ಜಾಗರಣ ಸಮಿತಿಯ ರೇವಣಸಿದ್ದಪ್ಪ ಜಲಾದೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ಪಾಟೀಲ ಗಾದಗಿ ವಂದನೆ ಸಲ್ಲಿಸಿದರು. ಮೇಹಕರ, ತಡೋಳಾ ಹಾಗೂ ಡೊಣಗಾಪುರ ಶ್ರೀಮಠದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು, ವಿದ್ಯಾಗಿರಿ ಮಹಾರಾಜರು, ಡಾ.ಶೈಲೇಂದ್ರ ಬೆಲ್ದಾಳೆ, ಗುರುನಾಥ ಕೊಳ್ಳುರ್, ಸಿದ್ದು ಪಾಟೀಲ ಹುಮನಾಬಾದ್, ಶಿವಶರಣಪ್ಪ ವಾಲಿ, ಶಿವು ಲೋಖಂಡೆ ಸೇರಿದಂತೆ ಸುಮಾರು 20 ಸಾವಿರಕ್ಕೂ ಅಧಿಕ ಸನಾತನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!