Saturday, February 4, 2023

Latest Posts

ನೇಪಾಳದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪುಷ್ಪ ಕಮಲ್ ದಹಾಲ್ ಪ್ರಚಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ (Nepal) ಪ್ರಧಾನಿಯಾಗಿ ಮಾಜಿ ಮಾವೋವಾದಿ ನಾಯಕ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಪ್ರಚಂಡ ಅವರನ್ನು ಭಾನುವಾರ ಹೊಸ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದರು. ಶೀತಲ್ ನಿವಾಸದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಅಧ್ಯಕ್ಷೆ ಭಂಡಾರಿ ಅವರು 68 ವರ್ಷದ ಪ್ರಚಂಡ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಸಿಪಿಎನ್- ಮಾವೋವಾದಿ ಸಂಘಟನೆ ಶಾಂತಿಯುತ ರಾಜಕೀಯವನ್ನು ಅಳವಡಿಸಿಕೊಂಡಾಗ, ದಶಕದ ಸಶಸ್ತ್ರ ದಂಗೆಯನ್ನು ಕೊನೆಗೊಳಿಸಿ ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರುವ ಮೊದಲು ಪ್ರಚಂಡ ಒಂದು ದಶಕಕ್ಕೂ ಹೆಚ್ಚು ಕಾಲ ಭೂಗತರಾಗಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!