ಹೊಸದಿಗಂತ ವರದಿ ಮಂಡ್ಯ:
ಅಕ್ರಮವಾಗಿ ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ತಾಲ್ಲೂಕಿನ ರಾಗಿಮುದ್ದನಹಳ್ಳಿ ಸಮೀಪ ಯುವಕರು ಭಾನುವಾರ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಾಂಡವಪುರ ರಸ್ತೆಯಿಂದ ರಾಗಿಮುದ್ದನಹಳ್ಳಿ ಹೆದ್ದಾರಿಯ ಮಂಡ್ಯ ಮಾರ್ಗವಾಗಿ 40ಕ್ಕೂ ಹೆಚ್ಚು ಕೋಣಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಅನ್ನು ಅಲ್ಲಿನ ಸ್ಥಳೀಯ ಯುವಕರ ತಂಡವು ಅಡ್ಡ ಹಾಕಿದೆ. ಜೊತೆಗೆ ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ, ಚಾಲಕ ಉತ್ತರ ಹೇಳಲು ತಡವರಿಸಿದಾಗ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನಂತರ ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ಯಾಂಟರ್ ಸಮೇತ ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಸಂಜೆವರೆಗೂ ದೂರು ದಾಖಲಾಗಿರಲಿಲ್ಲ.