ಹೊಸದಿಗಂತ, ಹುಬ್ಬಳ್ಳಿ:
ಜೈನ ಮುನಿಗಳ ಪ್ರವಾಸದ ವೇಳೆ ಶಾಲೆಗಳಲ್ಲಿ ವ್ಯವಸ್ಥೆ ಹಾಗೂ ಆಯೋಗ ಸ್ಥಾಪನೆ ಬೇಡಿಕೆಗಳನ್ನು ಸರ್ಕಾರ ಇನ್ನೂ ಈಡೇರಿಸಿಲ್ಲ. ಫೆ. ೭ರ ರೊಳಗೆ ಈಡೇರಿಸಲು ಸರ್ಕಾರಕ್ಕೆ ಗಡುವು ನೀಡಲಾಗುತ್ತಿದ್ದು, ಇಲ್ಲವಾದಲ್ಲಿ ಫೆ. ೮ ರಂದು ಚಿಕ್ಕೋಡಿ ಶಮನೇವಾಡಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವರೂರಿನ ಗುಣಧರ ನಂದಿ ಜೈನ್ ಮುನಿಗಳ ಎಚ್ಚರಿಕೆ ನೀಡಿದರು.
ಮಂಗಳವಾರ ವರೂರಿನ ನವಗ್ರಹದ ತೀರ್ಥ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಮಕುಮಾರ ನಂದಿ ಸ್ವಾಮೀಜಿ ಅವರು ಹತ್ಯೆ ಬಳಿಕ ಸರ್ಕಾರಕ್ಕೆ ನಾಲ್ಕು ಬೇಡಿಕೆ ಈಡೇರಿಸಲು ಆಗ್ರಹಿಸಲಾಗಿತ್ತು. ಅದರಲ್ಲಿ ಜೈನ್ ಮುನಿಗಳ ಹತ್ಯೆ ತನಿಖೆ ನಡೆದು ಆರೋಪಿಗೆ ಶಿಕ್ಷೆ ಹಾಗೂ ಜೈನ್ ಮುನಿಗಳಿಗೆ ರಕ್ಷಣೆ ನೀಡಲಾಗಿದೆ.
ಆದರೆ ಪ್ರವಾಸದಲ್ಲಿರುವ ಶಾಲೆಗಳಲ್ಲಿ ವ್ಯವಸ್ಥೆ, ಜೈನ್ ಆಯೋಗ ರಚಿಸುವ ಬೇಡಿಕೆ ಈಡೇರಿಸಿಲ್ಲ ಎಂದರು. ಆದ್ದರಿಂದ ಒಂದು ಲಕ್ಷದ ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಶ್ರೀರಾಮ ಮಂದಿರ ಉದ್ಘಾಟನೆ ಸಂತೋಷದ ಸಂಗತಿ. ಇದರಿಂದ ದೇಶದಲ್ಲಿ ರಾಮ ರಾಜ ನಿರ್ಮಾಣವಾಗಲಿ. ಕೇಂದ್ರ ಸರ್ಕಾರದ ಸಮಾರಂಭಕ್ಕೆ ಎಲ್ಲ ಮಠಾಧೀಶರ ಆಹ್ವಾನಿಸಲು ತಾರತಮ್ಯ ಮಾಡಿದಂತೆ ಅನಿಸುತ್ತಿಲ್ಲ. ಜೈನ್ ಮುನಿಗಳಿಗೂ ಸಹ ಆಹ್ವಾನಿಸಿದ್ದು, ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.