Tuesday, September 27, 2022

Latest Posts

ಮೊಬೈಲ್‌ ಬಳಕೆದಾರರಿಗೆ 30 ದಿನಗಳ ವ್ಯಾಲಿಡಿಟಿ ಯೋಜನೆ ಒದಗಿಸಿ: ಟೆಲಿಕಾಂ ಕಂಪನಿಗಳಿಗೆ TRAI ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು (TSP) ಕನಿಷ್ಠ ಒಂದು ಪ್ಲಾನ್ ವೋಚರ್, ವಿಶೇಷ ಟ್ಯಾರಿಫ್ ವೋಚರ್ ಮತ್ತು ಕಾಂಬಿನೇಷನ್ ವೋಚರ್ʼನ್ನ ಒದಗಿಸಬೇಕು ಎಂದು ಭಾರತದ ಟೆಲಿಕಾಂ ನಿಯಂತ್ರಕ ಟ್ರಾಯ್ ಕಡ್ಡಾಯಗೊಳಿಸಿದೆ.

ಸೆಪ್ಟೆಂಬರ್ 12ರಂದು ಈ ಕುರಿತು ಪ್ರಕಟಣೆ ಹೊರಡಿಸಿದ ಟ್ರಾಯ್, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಅಂತಹ ನವೀಕರಣದ ದಿನಾಂಕವು ಒಂದು ತಿಂಗಳಲ್ಲಿ ಲಭ್ಯವಿಲ್ಲದಿದ್ದರೆ, ನವೀಕರಣದ ದಿನಾಂಕವು ಆ ತಿಂಗಳ ಕೊನೆಯ ದಿನಾಂಕವಾಗಿರುತ್ತದೆ ಎಂದು ಹೇಳಿದೆ.

ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರು ಕನಿಷ್ಠ ಒಂದು ಪ್ಲಾನ್ ವೋಚರ್, ಒಂದು ವಿಶೇಷ ಟ್ಯಾರಿಫ್ ವೋಚರ್ ಮತ್ತು ಮೂವತ್ತು ದಿನಗಳ ವ್ಯಾಲಿಡಿಟಿ ಹೊಂದಿರುವ ಒಂದು ಕಾಂಬೋ ವೋಚರ್ʼನ್ನ ನೀಡಬೇಕು . ಇದು ಪ್ರತಿ ತಿಂಗಳ ಅದೇ ದಿನಾಂಕದಂದು ನವೀಕರಿಸಲ್ಪಡುತ್ತದೆ ಮತ್ತು ಅಂತಹ ನವೀಕರಣದ ದಿನಾಂಕವು ಒಂದು ತಿಂಗಳಲ್ಲಿ ಲಭ್ಯವಿಲ್ಲದಿದ್ದರೆ, ನವೀಕರಣದ ದಿನಾಂಕವು ಆ ತಿಂಗಳ ಕೊನೆಯ ದಿನಾಂಕವಾಗಿರುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!