Monday, October 3, 2022

Latest Posts

ಸಿಎಂ, ಸಚಿವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ: ಸಿದ್ದರಾಮಯ್ಯ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಹೊಸದಿಗಂತ ವರದಿ,ಮೈಸೂರು:

ಮುಖ್ಯಮಂತ್ರಿಗಳು, ಸಚಿವ ವಿರುದ್ಧ ವಿಪಕ್ಷ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರರಾದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವರುಣಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಅವರು ಜಿಲ್ಲೆಯ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.

ಪಕ್ಷದ ಕಾರ್ಯಕರ್ತರೊಂದಿಗೆ ತಿ.ನರಸೀಪುರ ಪೊಲೀಸ್ ಠಾಣೆಗೆ ಆಗಮಿಸಿದ ಅವರು, ಠಾಣೆಯ ಇನ್ಸ್ಪೆಕ್ಟರ್‌ಗೆ,
ನಮಗೂ ಮೊಟ್ಟೆಎಸೆಯಲು ಬರಲ್ವಾ? ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಎಂದು
ಪ್ರಚೋಧನಾಕಾರಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ದೂರನ್ನು ನೀಡಿದರು. ಪೊಲೀಸರು ದೂರು ದಾಖಲಿಸಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೋಟದಪ್ಪ ಬಸವರಾಜು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕಾರ್ಯಕರ್ತರಿಗೆ ಮೊಟ್ಟೆ ಹೊಡೆಯಲು ಬರುವುದಿಲ್ಲವೇ ಎಂದಿದ್ದಾರೆ. ನಾವು ಶುರು ಮಾಡಿದರೆ ಮುಖ್ಯಮಂತ್ರಿ ಹಾಗೂ ಸಚಿವರು ಓಡಾಡಲು ಆಗುತ್ತದೆಯೇ ಎಂದು ಸವಾಲು ಹಾಕುತ್ತಾರೆ. ಒಬ್ಬ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಈ ರೀತಿ ಬೆದರಿಕೆ ಹಾಕಿರುವುದು ಅಕ್ಷöಮ್ಯ ಅಪರಾಧ. ಹಾಗೂ ಖಂಡನೀಯ. ಸಿದ್ದರಾಮಯ್ಯನವರ ಹೇಳಿಕೆಯನ್ನು ಅವರ ಶಾಸಕ ಪುತ್ರ ಸಮರ್ಥಿಸಿಕೊಂಡು, ಮತ್ತಷ್ಟು ಪ್ರಚೋಧನಾಕಾರಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ನಾನು ಇವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಹಳ ಹಿಂದಿನಿoದಲೂ ಜಾತಿ, ಜಾತಿ ನಡುವೆ, ಧರ್ಮ, ಧರ್ಮಗಳ ನಡುವೆ ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದ್ದಾರೆ. ಅದನ್ನು ಇನ್ನೂ ಮುಂದುವರಿಸಿಕೊoಡು ಹೋಗುತ್ತಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಈ ಹಿಂದೆಯೆಲ್ಲಾ ಸಮಾಜದಲ್ಲಿ ಅಶಾಂತಿಯನ್ನುoಟು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದರು. ಈಗಲೂ ನೀಡಿದ್ದಾರೆ. ಈ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ಸಿದ್ದರಾಮಯ್ಯ ಬಿಡಬೇಕು ಎಂದು ಒತ್ತಾಯಿಸಿದರು.
ಈ ದೇಶದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ, ಪ್ರಧಾನಿ ಇಂದಿರಾಗಾoಧಿ ಕಗ್ಗೊಲೆಯಾಯ್ತು . ಬಳಿಕ ಅವರ ಪುತ್ರರಾದ ಈ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರ ಕಗ್ಗೊಲೆಯಾಯ್ತು. ಈ ದೇಶದ ಪ್ರಧಾನಿಗಳ ಕಾಪಾಡಿಕೊಳ್ಳ ಯೋಗ್ಯತೆಯಿಲ್ಲದೆ ಕಾಂಗ್ರೆಸ್ ನಾಯಕರಿಗೆ, ಇಡೀ ದೇಶದ ಜನತೆಗೆ ಕೊರೋನಾ ವ್ಯಾಕ್ಸಿನ್ ನೀಡುವ ಮೂಲಕ ಇಡೀ ದೇಶದ ಜನರ ಪ್ರಾಣ ಕಾಪಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಹಿಂದೂಗಳ ಮಾರಣಹೋಮ ನಡೆಸಿದಂತಹ ಮತಾಂಧ ತಪ್ಪು ಜಯಂತಿಯನ್ನು ಆಚರಣೆ ತಂದ ಸಿದ್ದರಾಮಯ್ಯ, ಈ ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರಿಂದ ಚಿತ್ರಹಿಂಸೆಯ ನರಕ ಅನುಭವಿಸಿ, ದೇಶಕ್ಕಾಗಿ ಹುತಾತ್ಮರಾದ ಸಾವರ್ಕರ್ ಅವರನ್ನು ದೇಶದ್ರೋಹಿ ಎನ್ನುತ್ತಿದ್ದಾರೆ. 2023 ಚುನಾವಣೆಯಲ್ಲಿ ರಾಜ್ಯದ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತಮ ಅಂತೆಯೇ ಸಾರ್ವರ್ಕರ್ ಜಯಂತಿಯನ್ನು ಆಚರಣೆಗೆ ತರುವುದು ಶತಸಿದ್ಧ ಎಂದು ತಿಳಿಸಿದರು.
ಸಿದ್ದರಾಮಯ್ಯ ಸಂಚರಿಸುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆದನ್ನು ಜೆಡಿಎಸ್‌ನ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಖಂಡಿಸುತ್ತಿದ್ದಾರೆ. ಆದರೆ
ಮತಾಂಧರು ಈ ದೇಶದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿನಾಥ್ ಅವರಿಗೆ ಕೊಲೆ ಬೆದರಿಕೆ ಹಾಕುತ್ತಾರೆ 20 47ಕ್ಕೆ ಮುಸ್ಲಿಮ ರಾಷ್ಟç ಮಾಡ್ತೀನಿ ಅಂತಾರೆ ಹಿಂದೂಗಳ ಕತ್ತರಿಸುತ್ತೇವೆ ಅಂತಾರೆ. ಇದನ್ನೆಲ್ಲಾ ಖಂಡಿಸುವ ಯೋಗ್ಯತೆ ಇವರುಗಳಿಗೆ ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗುತ್ತಾರೆ ಅಂತ ವಿಧಾನಸೌಧಕ್ಕೆ ಚಪ್ಪಲಿ ಕಲ್ಲು ತೂರಿದರಲ್ಲ ಇವರುಗಳೆಲ್ಲಾ, ನಿಜವಾಗಲೂ ನೈತಿಕತೆ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.
ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದರು ನೀವು ಈ ಜನ್ಮದಲ್ಲಿ ಮುಸಲ್ಮಾನನಾಗಿ ಪರಿವರ್ತನೆಆಗಿ ಬಿಟ್ಟಿದ್ದೀರಿ. ಆದ್ದರಿಂದಲೇ ನೀವು ಹಿಂದೂ ವಿರೋಧಿಯಾಗಿ ಬಿಟ್ಟಿದ್ದೀರಿ ಎಂದು ಟೀಕಿಸಿದರು.
ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದ ಬಾಗಿಲಿಗೆ ಚಪ್ಪಲಿ ಕಾಲಿನಿಂದ ಒದ್ದು, ದಿವಂಗತ ಮಾಜಿ ಮಂತ್ರಿ ಬೆಂಕಿ ಮಹಾದೇವ ಅವರ ಮೇಲೆ ಹಲ್ಲೆ ಮಾಡಿದವರು, ಶಾಸಕರ ಮನೆಗೆ ಬೆಂಕಿ ಹಾಕಿಸಿದವರು, ಪೋಲಿಸ್ ಸ್ಟೇಷನ್ ಗೆ ನುಗ್ಗಿ ಕಲ್ಲುಗಳಿಂದ ಹೊಡೆದು ದಾಂಧಲೆ ನಡೆಸುವವರು, ಅಮಾಯಕರು,ಬಡವರು ಹಿಂದೂಗಳ ಕತ್ತನ್ನು ಚಾಕುವಿನಿಂದ ಕತ್ತರಿಸುವವರನ್ನು ಓಲೈಸುವವರ ಪರವಿರುವ ನಿಮ್ಮ ಹಿಂದೆ ಎಂತಹ ಜನರಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಅವರ ಶಾಸಕ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!