ಹೊಸದಿಗಂತ ವರದಿ, ಕಾರಟಗಿ:
ವೀರ ಸಾವರ್ಕರ್ ರ ಸಂತತಿ ಮುಗಿಸುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಎಸ್‌ಡಿಪಿಐನ ಇಮ್ರಾನ್ ಸೇರಿ ಸಂಘಟನೆಯ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಸ್‌ಡಿಪಿಐ ಸಂಘಟನೆಯ ಕಾರ್ಯದರ್ಶಿ ಇಮ್ರಾನ್, ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಜೀರ ಸಿಂಗನಾಳ ಮತ್ತು ಉಪಾಧ್ಯಕ್ಷ ದಾವೂದ್ ವಿರುದ್ಧ ಕಾರಟಗಿ ಠಾಣೆಯಲ್ಲಿ ಸೆಕ್ಷನ್ 353(2), 352, 351 ಆರ್ ಡಬ್ಲ್ಯೂ 3(5) ರಡಿ ಎಫ್ಐಆರ್ ದಾಖಲಾಗಿದೆ.