ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಕುತೂಹಲ ಮೂಡಿಸಿರುವ ಪುಷ್ಪ 2 ಚಿತ್ರಕ್ಕೆ ಸಂಬಂಧಿಸಿ ಐಟಂ ಸಾಂಗ್ ಬಿಡುಗಡೆಗೆ ಕೌಂಟ್‌ಡೌನ್ ಆರಂಭವಾಗಿರುವ ಬೆನ್ನಿಗೇ ಈಗ ಅದಕ್ಕೂ ಮುನ್ನ ‘ಪುಷ್ಪ 2’ ಹಾಡಿನ ಪ್ರೋಮೋ ಬಿಡುಗಡೆಗೊಳಿಸಿ ಅಭಿಮಾನಿಗಳಲ್ಲಿ ಚಿತ್ರತಂಡ ರೋಮಾಂಚನ ಮೂಡಿಸಿದೆ.
ಕನ್ನಡತಿ ಶ್ರೀಲೀಲಾ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಐಟಂ ಸಾಂಗ್ ರಿಲೀಸ್‌ಗೆ ನ.24ರಂದು ಸಂಜೆ 7.02 ಸಮಯ ನಿಗದಿಯಾಗಿದ್ದು, ಶ್ರೀಲೀಲಾ ಸ್ಪೆಷಲ್ ಸಾಂಗ್ ರಿಲೀಸ್ ಮಾಡೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. ಸದ್ಯ ಹಾಡಿನ ಸಣ್ಣ ತುಣುಕೊಂದು ರಿಲೀಸ್ ಮಾಡಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದೆ ಚಿತ್ರತಂಡ. ‘ಕಿಸ್ ಕಿಸ್ ಕಿಸ್ಸಿಕ್’ ಹಾಡಿನ ತುಣುಕು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹುಟ್ಟುಹಾಕಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ