ಹೊಸದಿಗಂತ ವರದಿ ಯಾದಗಿರಿ:
ಪ್ರಕರವೊಂದನ್ನು ಇತ್ಯರ್ಥಪಡಿಸಲು ಲಂಚ ಪಡೆಯುವ ವೇಳೆ ಗುರಮಠಕಲ್ ಪಿಎಸ್ ಐ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಶನಿವಾರ ನಡೆದಿದೆ.
ಗುರುಮಠಕಲ್ ಪೊಲೀಸ್ ಠಾಣೆ ಪಿಐ ವೀರಣ್ಣ ದೊಡ್ಡಮನಿ,ಪ್ರಕರಣ ದಾಖಲಾದ ಕೇಸ್ ನಲ್ಲಿ ಬಚಾವ್ ಮಾಡುವ ವಿಚಾರವಾಗಿ ಆನಂದ ಭಜಂತ್ರಿ ಅವರಿಂದ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಗುರುಮಠಕಲ್ ಪೊಲೀಸ್ ವಸತಿ ಗೃಹದಲ್ಲಿ ದೂರುದಾರ ಆನಂದ ಅವರಿಂದ 1 ಲಕ್ಷ ರೂಪಾಯಿ ಹಣ ಪಡೆಯುವಾಗ ದೊಡ್ಡಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಂದಾರ್ ,ಪಿಐ ಸಿದ್ದರಾಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪಿಐ ವೀರಣ್ಣ ದೊಡ್ಡಮನಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



